×
Ad

7 ಖಂಡಗಳ ಅತ್ಯುನ್ನತ ಪರ್ವತಗಳನ್ನು ಏರಲು ನೇಪಾಳದ ಸಹೋದರರ ಸಿದ್ಧತೆ

Update: 2021-12-15 22:50 IST
PHOTO : Twitter

ಕಠ್ಮಂಡು, ಡಿ.15: ವಿಶ್ವದ 7 ಖಂಡಗಳಲ್ಲಿನ ಪ್ರತೀ ಉನ್ನತ ಪರ್ವತವನ್ನು ಏರಲು ನೇಪಾಳದ ಇಬ್ಬರು ಪ್ರಸಿದ್ಧ ಶೆರ್ಪಾ ಗೈಡ್ ಸಹೋದರರು ನಿರ್ಧರಿಸಿದ್ದು ಈ ಬಗ್ಗೆ ಸಿದ್ಧತೆ ಆರಂಭಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಮಿಂಗ್ಮಾ ಶೆರ್ಪಾ ಮತ್ತು ಚಾಂಗ್ದಾವ ಶೆರ್ಪ ಈಗಾಗಲೇ ವಿಶ್ವದ 14 ಅತೀ ಎತ್ತರದ ಪರ್ವತಗಳನ್ನು (ಇವೆಲ್ಲವೂ ಏಶ್ಯಾ ಖಂಡದಲ್ಲಿವೆ) ಯಶಸ್ವಿಯಾಗಿ ಏರಿದ್ದಾರೆ. ಇದೀಗ ಜಾಗತಿಕ ಸಾಹಸ ಕಾರ್ಯದಲ್ಲಿ ಕಿರಿಯ ಸಹೋದರ ತಾಶಿ ಲಾಕ್ಪ ಇವರ ಜತೆ ಸೇರಲಿದ್ದಾನೆ. ತಾಶಿ ಈಗಾಗಲೇ 6 ಅತೀ ಎತ್ತರದ ಪರ್ವತ ಏರಿದ ಸಾಹಸಿ. 

ವಿಶ್ವದ ಎಲ್ಲಾ 14 ಅತೀ ಎತ್ತರದ ಪರ್ವತಗಳನ್ನು ಏರಿದ ಪ್ರಥಮ ಸಹೋದರರು ಎನಿಸಿಕೊಂಡಿರುವ ನಾವು ಇದೀಗ 7 ಖಂಡಗಳ ಅತೀ ಎತ್ತರದ ಪರ್ವತ ಏರಲಿದ್ದೇವೆ ಮತ್ತು ವಿಶ್ವದ ಎರಡೂ ದ್ರುವಗಳನ್ನು ತಲುಪುವ ಮೂಲಕ ‘ಪರ್ವತಾರೋಹಣದ ಗ್ರ್ಯಾಂಡ್ಸ್ಲ್ಯಾಮ್ ಸಹೋದರರು ಎಂಬ ದಾಖಲೆ ಬರೆಯುವ ಮಹಾತ್ವಾಕಾಂಕ್ಷೆ ಹೊಂದಿದ್ದೇವೆ . 

ಒಂದು ವರ್ಷದೊಳಗೆ ಈ ಸಾಧನೆ ಮಾಡುವ ಗುರಿ ಹೊಂದಿದ್ದೇವೆ ಎಂದು ಮಿಂಗ್ಮಾ ಹೇಳಿರುವುದಾಗಿ ದಿ ಅಸೋಸಿಯೇಟೆಡ್ ಪ್ರೆಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಿದ ಬಳಿಕ ಅಂಟಾರ್ಕ್ಟಿಕಾ ಖಂಡದ ಮೌಂಟ್ ವಿನ್ಸನ್ ಏರಿದ್ದು ಇನ್ನು 5 ಖಂಡದ ಪರ್ವತ ಏರಲು ಬಾಕಿಯಿದೆ. ಬಳಿಕ ಉತ್ತರ ದ್ರುವ ತಲುಪುವ ಯೋಜನೆಯಿದೆ. ಈ ಸಹೋದರರು ನೇಪಾಳದ ಪ್ರಸಿದ್ಧ ಪರ್ವತಾರೋಹಣ ಸಂಸ್ಥೆ ಸೆವೆನ್ ಸಮ್ಮಿಟ್ಸ್ ಟ್ರೆಕ್ಸ್ ನ ನಿರ್ವಾಹಕರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News