ನಾವು ಅಮೆರಿಕವನ್ನು ಸೋಲಿಸಿದೆವು": ಅಮೆರಿಕ ಅಳವಡಿಸಿದ್ದ ಬೃಹತ್ ಫಲಕದಲ್ಲಿ ತಾಲಿಬಾನ್ ಗಳ ಘೋಷಣೆ

Update: 2022-01-04 18:47 GMT
ಸಾಂದರ್ಭಿಕ ಚಿತ್ರ:PTI

ಕಾಬೂಲ್, ಜ.4: ಅಫ್ಘಾನಿಸ್ತಾನದ ಘಜ್ನಿ ಪ್ರಾಂತದಲ್ಲಿ ಈ ಹಿಂದೆ ಅಮೆರಿಕದ ಸೇನಾ ನೆಲೆಯಾಗಿದ್ದ ಕಟ್ಟಡದ ಗೋಡೆಯ ಮೇಲೆ ತಾಲಿಬಾನ್‌ಗಳ ವಿಜಯ ಯಾತ್ರೆಯ ವಿವರ ನೀಡುವ ಘೋಷಣೆಗಳು ಹಾಗೂ ಸಂಕೇತಗಳನ್ನು ಚಿತ್ರಿಸಲಾಗಿದೆ ಎಂದು ವರದಿಯಾಗಿದೆ.

ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ 20 ವರ್ಷ ನಡೆಸಿದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ರೆಜಿಮೆಂಟ್‌ಗಳ ಹೆಸರು, ಪ್ರಮುಖ ಸೇನಾಧಿಕಾರಿಗಳ ಹೆಸರು, ಸಾಧನೆ ಇತ್ಯಾದಿಗಳನ್ನು ಪ್ರದರ್ಶಿಸುವ ಬೃಹತ್ ಫಲಕ ಇಲ್ಲಿದೆ. ಈಗ ಘಜ್ನಿ ಪ್ರಾಂತದ ಗವರ್ನರ್ ಕಚೇರಿಯಾಗಿರುವ ಈ ಕಟ್ಟಡದ ಬೃಹತ್ ಫಲಕದಲ್ಲಿ ಅಮೆರಿಕ ನೇತೃತ್ವದ ಪಡೆಗಳನ್ನು 20 ವರ್ಷದ ಹೋರಾಟದ ಬಳಿಕ ಹಿಮ್ಮೆಟ್ಟಿಸಿದ ತಾಲಿಬಾನ್‌ಗಳ ಸಾಧನೆಯನ್ನು ವರ್ಣಿಸುವ ಚಿತ್ರ ಮತ್ತು ಸಂದೇಶಗಳಿವೆ. ಅಮೆರಿಕ ವಿಶ್ವದ ಬಲಿಷ್ಟ ದೇಶವಾಗಿದ್ದರೂ ನಾವು ಅವರನ್ನು ಸೋಲಿಸಿದೆವು ಎಂಬುದನ್ನು ಅಫ್ಘಾನ್ನರಿಗೆ, ವಿಶ್ವಕ್ಕೆ ಮತ್ತು ಮುಂದಿನ ತಲೆಮಾರಿನವರಿಗೆ ತೋರಿಸುವ ಉದ್ದೇಶ ನಮ್ಮದು ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News