ಹಾಂಕಾಂಗ್ ಪಿಎಲ್ಎಗೆ ಪೊಲೀಸ್ ಮುಖ್ಯಸ್ಥರನ್ನು ನೇಮಿಸಿದ ಕ್ಸಿ ಜಿನ್ಪಿಂಗ್

Update: 2022-01-10 18:20 GMT
ಕ್ಸಿ ಜಿನ್ಪಿಂಗ್ 

ಬೀಜಿಂಗ್, ಜ.10: ಚೀನಾದ ಅರೆಸೇನಾ ಪೊಲೀಸ್ ಪಡೆಯ ಮಾಜಿ ಹಿರಿಯ ಅಧಿಕಾರಿ ಮೇಜರ್ ಜನರಲ್ ಪೆಂಗ್ ಜಿಂಗ್ಟಾಂಗ್ರನ್ನು ಹಾಂಕಾಂಗ್‌ನಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯ ರಕ್ಷಣಾ ದಳದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್  ಅವರ ಕಚೇರಿಯ ಹೇಳಿಕೆ ತಿಳಿಸಿದೆ.

ಪೆಂಗ್ ಈ ಹಿಂದೆ ಕ್ಸಿನ್‌ಜಾಂಗ್ಪ್ರಾಂತದ ಸಶಸ್ತ್ರ ಪೊಲೀಸ್ ಪಡೆ ಸಿಬಂದಿ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹಾಂಕಾಂಗ್‌ನಲ್ಲಿ ಪಿಎಲ್ಎ ರಕ್ಷಣಾ ಪಡೆಯ ಮುಖ್ಯಸ್ಥರಾಗಿ ಕಮ್ಯುನಿಸ್ಟ್ ಪಕ್ಷ ಮತ್ತು ಕ್ಸಿ ಜಿನ್ಪಿಂಗ್ ಅವರ ಆದೇಶಗಳನ್ನು ಅನುಷ್ಟಾನಗೊಳಿಸುವುದು, ದೇಶದ ಸಾರ್ವಭೌಮತೆ ಮತ್ತು ಭದ್ರತಾ ಹಿತಾಸಕ್ತಿಯನ್ನು ರಕ್ಷಿಸುವುದು ತನ್ನ ಜವಾಬ್ದಾರಿಯಾಗಿದೆ ಎಂದು ಪೆಂಗ್ ಪ್ರತಿಕ್ರಿಯಿಸಿದ್ದಾರೆ.

ಬ್ರಿಟನ್‌ನ ನಿಯಂತ್ರಣದಡಿ ವಿಶೇಷ ಆಡಳಿತ ಪ್ರದೇಶವಾಗಿದ್ದ ಹಾಂಕಾಂಗ್ ಅನ್ನು ವ್ಯಾಪಕ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸಲಾಗುವುದು ಎಂಬ ವಾಗ್ದಾನದಡಿ 1997ರಲ್ಲಿ ಚೀನಾದ ಆಡಳಿತಕ್ಕೆ ಮರಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News