×
Ad

ಚೀನಾ: ತಿಯಾನ್‌ಜಿನ್ ಪ್ರಾಂತದಲ್ಲಿ ಕಠಿಣ ನಿರ್ಗಮನ ನಿಯಂತ್ರಣ ಕ್ರಮ ಜಾರಿ

Update: 2022-01-10 23:54 IST
ಸಾಂದರ್ಭಿಕ ಚಿತ್ರ

ಬೀಜಿಂಗ್, ಜ.10: ಒಮೈಕ್ರಾನ್ ಸೋಂಕು ಪ್ರಕರಣ ತೀವ್ರಪ್ರಮಾಣದಲ್ಲಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಚೀನಾದ ತಿಯಾನ್‌ಜಿನ್ ಪ್ರಾಂತದಲ್ಲಿ ನಿರ್ಗಮನ ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಲಾಗಿದೆ ಎಂದು ಮೂಲಗಳು ಹೇಳಿವೆ.

ನಗರವನ್ನು ತೊರೆಯುವ ಮೊದಲು ಉದ್ಯೋಗದಾತರು ಅಥವಾ ಸಮುದಾಯ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರದಲ್ಲಿ ರವಿವಾರ ಸ್ಥಳೀಯವಾಗಿ ಪ್ರಸಾರಗೊಂಡ 21 ಒಮೈಕ್ರಾನ್ ಸೋಂಕು ಪ್ರಕರಣ ದಾಖಲಾಗಿರುವುದರಿಂದ ಒಮೈಕ್ರಾನ್ ಹರಡುವಿಕೆಯನ್ನು ನಿಯಂತ್ರಿಸಲು ಬಿಗಿ ಕ್ರಮ ಅಗತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 14 ಮಿಲಿಯನ್ ಜನಸಂಖ್ಯೆಯ ತಿಯಾನ್‌ಜಿನ್ ಪ್ರಾಂತದಲ್ಲಿ ರವಿವಾರ ಒಮೈಕ್ರಾನ್‌ನ 2 ಸ್ಥಳೀಯ ಸೋಂಕು ಪ್ರಕರಣ ವರದಿಯಾಗಿತ್ತು. ಸೋಂಕಿನ ಮೂಲ ಸ್ಪಷ್ಟವಾಗಿಲ್ಲ . ಈ ವಲಯದಲ್ಲಿ ದಾಖಲಾಗಿರುವ ಇತರ ಸೋಂಕು ಪ್ರಕರಣಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ಈ ಮಧ್ಯೆ, ಬೀಜಿಂಗ್ ಮತ್ತು ನೆರೆಯ ಹೀಬೈ ಪ್ರಾಂತದಲ್ಲಿ ಫೆಬ್ರವರಿ 4ರಿಂದ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿರುವುದರಿಂದ ಈ ಟೂರ್ನಿಯ ವೇಳೆ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಚೀನಾ ಅತ್ಯಂತ ಕಟ್ಟುನಿಟ್ಟಿನ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ತಿಯಾನ್‌ಜಿನ್‌ನಲ್ಲಿ ಸಾಮೂಹಿಕ ಪರೀಕ್ಷೆ ಪ್ರಕ್ರಿಯೆ ನಡೆಸಲಾಗಿದೆ. ಚೀನಾದ ಹೆನಾನ್ ಪ್ರಾಂತದಲ್ಲಿ ಒಮೈಕ್ರಾನ್‌ನ 2 ಪ್ರಕರಣ ಪತ್ತೆಯಾಗಿದೆ ಎಂಬ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News