×
Ad

ಟ್ವೆಂಟಿ-20: ಇಂಗ್ಲೆಂಡ್ ವಿರುದ್ಧ ಅಂತಿಮ ಓವರ್ ನಲ್ಲಿ 28 ರನ್ ಗಳಿಸಿದರೂ 1 ರನ್ ನಿಂದ ಸೋತ ವಿಂಡೀಸ್!

Update: 2022-01-24 11:38 IST
Photo: AFP

ಬಾರ್ಬಡೋಸ್‌:  ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ರವಿವಾರ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ  ಇಂಗ್ಲೆಂಡ್ ವಿರುದ್ಧ  172 ರನ್‌ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 15.1 ಓವರ್‌ಗಳಲ್ಲಿ 95ಕ್ಕೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.  

ಅಗ್ರ ಕ್ರಮಾಂಕದ ನಿರಾಶಾದಾಯಕ ಪ್ರದರ್ಶನದ ನಡುವೆಯೂ  ಅಕೆಲ್ ಹೊಸೈನ್ ಹಾಗೂ ರೊಮಾರಿಯೊ ಶೆಫರ್ಡ್ ಪಂದ್ಯವನ್ನು ಕೊನೆಯ ಓವರ್‌ವರೆಗೆ ಕೊಂಡೊಯ್ಯಲು ಯಶಸ್ವಿಯಾದರು ಎಂಬುದು ಸ್ವತಃ ಒಂದು ಸಾಧನೆಯಾಗಿದೆ.  ವಿಂಡೀಸ್ ಗೆಲುವಿಗೆ 6 ಎಸೆತಗಳಲ್ಲಿ 30 ರನ್ ಅಗತ್ಯವಿತ್ತು. ಅಂತಿಮ ಓವರ್ ನಲ್ಲಿ  ಹೊಸೈನ್ 3 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿದರೂ ವಿಂಡೀಸ್ ಗೆಲುವಿಗೆ 1 ರನ್ ಕೊರತೆಯಾಯಿತು.  ವಿಂಡೀಸ್ 20 ಓವರ್ ಗಳಲ್ಲಿ  8 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ 1 ರನ್ ನಿಂದ ಸೋಲುಂಡಿತು.

ಕೊನೆಯ ಆರು ಎಸೆತಗಳಲ್ಲಿ ವೆಸ್ಟ್ ಇಂಡೀಸ್‌ಗೆ 30 ರನ್‌ಗಳ ಅಗತ್ಯವಿದ್ದಾಗ  ಅಕೇಲ್ ಹೊಸೈನ್ ಸ್ಟ್ರೈಕ್‌ನಲ್ಲಿದ್ದರು. ತಮ್ಮ ಹಿಂದಿನ ಮೂರು ಓವರ್‌ಗಳಲ್ಲಿ ಮಿತವ್ಯಯಿ ಆಗಿದ್ದ ಇಂಗ್ಲೆಂಡ್ ನ ಬಲಗೈ ಮಧ್ಯಮ ವೇಗಿ ಸಾಕಿಬ್ ಮಹಮೂದ್ ಕೊನೆಯ ಓವರ್ ಎಸೆಯಲು ಮುಂದಾದರು.

ಮಹಮೂದ್ ಮೊದಲ ಎಸೆತ ವೈಡ್‌ನಿಂದ ಆರಂಭಿಸಿದರು. ಹೊಸೈನ್ ಕೊನೆಯ ಓವರ್ ನಲ್ಲಿ 2 ಬೌಂಡರಿ ಹಾಗೂ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ವಿಂಡೀಸ್ ಗೆ ಅಸಾಮಾನ್ಯ ಗೆಲುವು ತಂದು ಕೊಡಲು ಯತ್ನಿಸಿದರು. ಕೊನೆಯ ಓವರ್ ನಲ್ಲಿ ಕಳಪೆ ಬೌಲಿಂಗ್ ಮಾಡಿದ್ದ ಮಹಮೂದ್ ಎರಡು ವೈಡ್ ಕೂಡ ನೀಡಿದರು.  

ಹೊಸೈನ್ ಕೇವಲ 16 ಎಸೆತಗಳಲ್ಲಿ3 ಬೌಂಡರಿ, 4 ಸಿಕ್ಸರ್ ಗಳ ಸಹಿತ  44 ರನ್ ಗಳಿಸಿ ಅಜೇಯರಾಗಿ ಉಳಿದರು.  ಶೆಫರ್ಡ್ 28 ಎಸೆತಗಳಲ್ಲಿ ಔಟಾಗದೆ 44 ರನ್ (1 ಬೌಂಡರಿ, 5 ಸಿಕ್ಸರ್) ಗಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News