ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದ ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ

Update: 2022-01-24 09:26 GMT

ಹೊಸದಿಲ್ಲಿ: ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 2021 ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.  

ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತವು ತವರಿನಲ್ಲಿ ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ ಎರಡನ್ನು ಗೆದ್ದುಕೊಂಡಿತು. ಈ ಎರಡು ಗೆಲುವಿನಲ್ಲಿ ಮಂಧಾನ ಪ್ರಮುಖ ಪಾತ್ರ ವಹಿಸಿದ್ದರು.

ಡ್ರಾದಲ್ಲಿ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮಂಧಾನ 78 ರನ್‌ಗಳ ಭವ್ಯವಾದ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಏಕದಿನ ಸರಣಿಯಲ್ಲಿ ಭಾರತದ ಏಕೈಕ ಗೆಲುವಿನಲ್ಲಿ ಅವರು 49 ರನ್‌ಗಳ ಪ್ರಮುಖ ಇನಿಂಗ್ಸ್  ಆಡಿದ್ದರು. ಟ್ವೆಂಟಿ-20 ಸರಣಿಯಲ್ಲಿ ಅವರ 15 ಎಸೆತಗಳ 29  ರನ್ ಹಾಗೂ  ಅರ್ಧಶತಕವು ವ್ಯರ್ಥವಾಯಿತು.  ಆದರೂ ಭಾರತವು ಎರಡೂ ಪಂದ್ಯಗಳಲ್ಲಿ ಸೋಲುಂಡಿತು ಹಾಗೂ ಸರಣಿಯನ್ನು 2-1 ರಲ್ಲಿ ಕಳೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News