×
Ad

ವಿಕೆಟ್ ಪಡೆದ ಬಳಿಕ ಅಲ್ಲು ಅರ್ಜುನ್ ಅವರ ‘ಪುಷ್ಪಾ ವಾಕ್’ ಪ್ರದರ್ಶಿಸಿದ ವಿಂಡೀಸ್ ಆಲ್ ರೌಂಡರ್ ಡ್ವೇಯ್ನ್ ಬ್ರಾವೊ

Update: 2022-01-26 12:17 IST
Photo: Twitter/@FanCode

ಢಾಕಾ: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಚಿತ್ರ 'ಪುಷ್ಪ: ದಿ ರೈಸ್' ಜಗತ್ತಿನಾದ್ಯಂತ ಕ್ರಿಕೆಟಿಗರಲ್ಲಿ ಸಾಕಷ್ಟು ಪ್ರಭಾವವನ್ನು ಬೀರಿದೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಂತರ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಕೂಡ ತಮ್ಮ ನೃತ್ಯದ ಕೌಶಲ್ಯವನ್ನು ಮೈದಾನದಲ್ಲಿ ತೋರಿಸಿದ್ದಾರೆ.

‘ಶ್ರೀವಲ್ಲಿ’ ಹಾಡಿನ ಅಲ್ಲು ಅರ್ಜುನ್ ಅವರ ಡ್ಯಾನ್ಸ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಖಲೀಲ್ ಅಹ್ಮದ್ ಕೂಡ ಹಾಡಿನಲ್ಲಿ ತಮ್ಮ ನೃತ್ಯದ ಚಲನೆಯನ್ನು ಹಂಚಿಕೊಂಡಿದ್ದಾರೆ.  ಪ್ರಸಿದ್ಧ ನೃತ್ಯದ ಚಲನೆಯನ್ನು '‘ಪುಷ್ಪಾ ವಾಕ್' ಎಂದು ಕರೆಯಲಾಗುತ್ತಿದೆ.

ಕೊಮಿಲ್ಲಾ ವಿಕ್ಟೋರಿಯನ್ಸ್ ವಿರುದ್ಧ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಎಪಿಲ್) ಪಂದ್ಯದ ವೇಳೆ ವಿಕೆಟ್ ಪಡೆದ ಬಳಿಕ ಬ್ರಾವೊ ಕ್ರಿಕೆಟ್ ಮೈದಾನದಲ್ಲಿ ಅಲ್ಲು ಅರ್ಜುನ್ ಅವರ  ಪುಷ್ಪ ಚಿತ್ರದ 'ಪುಷ್ಪವಾಕ್'  ಪ್ರದರ್ಶಿಸಿದರು.

ಬ್ರಾವೊ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದರು. ತನ್ನ ತಂಡ ಫಾರ್ಚೂನ್ ಬೊರಿಶಾಲ್‌ಗೆ  ಎದುರಾಳಿ ಕೊಮಿಲ್ಲಾ ವಿಕ್ಟೋರಿಯಾವನ್ನು 20 ಓವರ್‌ಗಳಲ್ಲಿ 158/7 ಕ್ಕೆ ನಿಯಂತ್ರಿಸಲು ಸಹಾಯ ಮಾಡಿದರು. ಆಲ್‌ರೌಂಡರ್‌ನ ಚೆಂಡಿನ ಅಬ್ಬರದ ಹೊರತಾಗಿಯೂ ಫಾರ್ಚೂನ್ ಬಾರಿಶಾಲ್ 63 ರನ್‌ಗಳಿಂದ ಸೋಲನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News