ಇರಾಕ್ ಸಂಸತ್ತಿನ ಸ್ಪೀಕರ್ ನಿವಾಸದತ್ತ ರಾಕೆಟ್ ದಾಳಿ: ಇಬ್ಬರು ಮಕ್ಕಳಿಗೆ ಗಾಯ

Update: 2022-01-26 17:10 GMT
ಸಾಂದರ್ಭಿಕ ಚಿತ್ರ:PTI

ಬಗ್ದಾದ್, ಜ.26: ಇರಾಕ್ ಸಂಸತ್ತಿನ ಸ್ಪೀಕರ್ ನಿವಾಸವನ್ನು ಗುರಿಯಾಗಿಸಿ ಮಂಗಳವಾರ ನಡೆದ ರಾಕೆಟ್ ದಾಳಿಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿರುವುದಾಗಿ ಭದ್ರತಾ ಪಡೆಯ ಮೂಲಗಳು ಹೇಳಿವೆ.

ಬಾಗ್ದಾದ್‌ನ ಪಶ್ಚಿಮದ ಅನ್ಬಾರ್ ಪ್ರಾಂತದ ಗುರ್ಮಾ ಜಿಲ್ಲೆಯಲ್ಲಿರುವ ಸ್ಪೀಕರ್ ಮುಹಮ್ಮದ್ ಅಲ್ ಹಲ್ಬುಸಿ ಅವರ ಮನೆಗಿಂದ ಸುಮಾರು 500 ಮೀಟರ್ ದೂರದಲ್ಲಿ ರಾಕೆಟ್‌ಗಳು ಅಪ್ಪಳಿಸಿದ್ದು 2 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ‌

ಹಲ್ಬುಸಿ ಸ್ಪೀಕರ್ ಆಗಿ ಮರುಆಯ್ಕೆ ಆಗಿರುವುದನ್ನು ಇರಾಕ್ ನ ಉನ್ನತ ನ್ಯಾಯಾಲಯ ದೃಢಪಡಿಸಿದ ಕೆಲವೇ ಗಂಟೆಗಳಲ್ಲಿ ಈ ರಾಕೆಟ್ ದಾಳಿ ನಡೆದಿದೆ. ಹಲ್ಬುಸಿಯನ್ನು ಗುರಿಯಾಗಿಸಿ ದಾಳಿ ನಡೆದಿದೆ. ಆದರೆ ಅವರು ಆ ಸಂದರ್ಭ ಮನೆಯಲ್ಲಿದ್ದರೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ. ಸುನ್ನಿ ಮುಖಂಡರಾಗಿರುವ ಹಲ್ಬುಸಿ 2018ರಿಂದ ಸಂಸತ್ತಿನ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News