×
Ad

ಮೊದಲ ಏಕದಿನ ಪಂದ್ಯ: ಇಶಾನ್ ಕಿಶನ್ ರೊಂದಿಗೆ ಬ್ಯಾಟಿಂಗ್ ಆರಂಭಿಸುವೆ: ರೋಹಿತ್ ಶರ್ಮಾ

Update: 2022-02-05 14:55 IST

ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮುನ್ನಾದಿನದಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಇಶಾನ್ ಕಿಶನ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಸರಣಿ ಆರಂಭಕ್ಕೆ ಮೊದಲು ನಾಲ್ವರು ಆಟಗಾರರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್,  ನವದೀಪ್ ಸೈನಿ ಹಾಗೂ ಋತುರಾಜ್ ಗಾಯಕ್ವಾಡ್ ಸೇರಿದಂತೆ ಭಾರತ ತಂಡದ ಏಳು ಸದಸ್ಯರು ಕೋವಿಡ್-19 ಗೆ ಸೋಂಕಿಗೆ ಒಳಗಾಗಿದ್ದರು.

"ಇಶಾನ್ (ಕಿಶನ್) ಏಕೈಕ ಆಯ್ಕೆಯಾಗಿದ್ದಾರೆ. ಅವರು  ಇನಿಂಗ್ಸ್  ಆರಂಭಿಸುತ್ತಾರೆ. ಮಯಾಂಕ್ (ಅಗರ್ವಾಲ್) ಇನ್ನೂ ಪ್ರತ್ಯೇಕತೆಯಲ್ಲಿದ್ದಾರೆ. ಕೆಲವು ನಿಯಮಗಳು ಜಾರಿಯಲ್ಲಿವೆ.  ಪ್ರಯಾಣಿಸುವ ಆಟಗಾರರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕಾಗಿದೆ" ಎಂದು ರೋಹಿತ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಫೆಬ್ರವರಿ 6 ರಂದು ರವಿವಾರ ಆರಂಭವಾಗುವ ಮೂರು ಪಂದ್ಯಗಳ ಸರಣಿಗಾಗಿ ಮಯಾಂಕ್ ಅಗರ್ವಾಲ್ ಹಾಗೂ ಇಶಾನ್ ಕಿಶನ್ ಅವರನ್ನು ಭಾರತದ ಏಕದಿನ ಕ್ರಿಕೆಟ್ ತಂಡಕ್ಕೆ ಸೇರಿಸಲಾಗಿದೆ.

ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಲ್ಲದೆ ಏಕದಿನ ಸರಣಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News