×
Ad

5ನೇ ಬಾರಿ ಅಂಡರ್-19 ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟ ಟೀಂ ಇಂಡಿಯಾ

Update: 2022-02-06 02:10 IST
(ಫೋಟೊ - PTI)

ಆಂಟಿಗುವಾ: ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡ ದಾಖಲೆಯ 5ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಜಯ ಸಾಧಿಸಿತು. 

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 44.5 ಓವರ್‌ಗಳಲ್ಲಿ 189 ರನ್‌ಗೆ ಅಲೌಟ್ ಆಯಿತು. ಜಾರ್ಜ್ ರೆವ್ ಹೋರಾಟದ 95 ರನ್ ಸಿಡಿಸಿದರು. ರಾಜ್ ಬವಾ ಕೇವಲ 31 ರನ್‌ಗೆ 5 ವಿಕೆಟ್ ಕಿತ್ತರು.

ಗುರಿ ಬೆನ್ನತ್ತಿದ ಟೀಂ ಇಂಡಿಯಾ 47.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಗಳಿಸಿತು. ಶೇಖ್ ರಶೀದ್ (50), ನಿಶಾಂತ್ ಸಿಂಧು (ಔಟಾಗದೆ 50) ಅರ್ಧಶತಕ ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News