×
Ad

ಮೊದಲ ಏಕದಿನ: ಭಾರತ ವಿರುದ್ಧ ವೆಸ್ಟ್ ಇಂಡೀಸ್ 176 ರನ್ ಗೆ ಆಲೌಟ್

Update: 2022-02-06 17:06 IST

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ಗೆಲುವಿಗೆ 177 ರನ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ತಂಡವು 43.5 ಓವರ್ ಗಳಲ್ಲಿ ಕೇವಲ 176 ರನ್ ಗೆ ಆಲೌಟಾಯಿತು. ಜೇಸನ್ ಹೋಲ್ಡರ್ ಹೊರತುಪಡಿಸಿ ಉಳಿದವರು ಬ್ಯಾಟಿಂಗ್ ವೈಫಲ್ಯಕ್ಕೊಳಗಾದರು. ಹೋಲ್ಡರ್ 71 ಎಸೆತಗಳಲ್ಲಿ 57 ರನ್ ಗಳಿಸಿದರು.

ಇದೆ ವೇಳೆ ಸ್ಪಿನ್ನರ್ ಯಜುವೇಂದ್ರ ಚಹಾಲ್ 49 ರನ್ ಗೆ 4 ವಿಕೆಟ್ ಗಳನ್ನು ಕಬಳಿಸಿ ಮಿಂಚಿದರು. ವಾಷಿಂಗ್ಟನ್ ಸುಂದರ್ (3-30)ಮೂರು ವಿಕೆಟ್ ಗಳನ್ನು ಕಬಳಿಸಿದರೆ, ಮುಹಮ್ಮದ್ ಸಿರಾಜ್ (1-26)ಹಾಗೂ ಪ್ರಸಿದ್ಧ ಕೃಷ್ಣ (2-29) ತಲಾ 1 ಹಾಗೂ 2 ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News