ಐಪಿಎಲ್ ಹರಾಜು 2022: 11.50 ಕೋ.ರೂ.ಗೆ ಪಂಜಾಬ್ ಪಾಲಾದ ಇಂಗ್ಲೆಂಡ್ ನ ಲಿವಿಂಗ್ ಸ್ಟೋನ್
Update: 2022-02-13 13:01 IST
ಬೆಂಗಳೂರು: ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ (ಮೂಲ ಬೆಲೆ 1 ಕೋಟಿ ರೂ.) ಅವರನ್ನು ಪಂಜಾಬ್ ಕಿಂಗ್ಸ್ ತಂಡವು 11.5 ಕೋಟಿಗೆ ಆಯ್ಕೆ ಮಾಡಿದೆ.
ಬಲಗೈ ಆಟಗಾರ ಕಳೆದ ವರ್ಷ ರಾಜಸ್ಥಾನ ರಾಯಲ್ಸ್‌ನೊಂದಿಗೆ ತನಗೆ ಲಭಿಸಿರುವ ಸೀಮಿತ ಅವಕಾಶಗಳಲ್ಲಿ ಅಷ್ಟೇನೂ ಉತ್ತಮವಾಗಿ ಆಡಿರಲಿಲ್ಲ. ಆದರೆ ಅವರು ಇಂಗ್ಲೆಂಡ್ ಹಾಗೂ ಬಿಬಿಎಲ್ ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಭಾರತದ ಆಲ್ ರೌಂಡರ್ ವಿಜಯ್ ಶಂಕರ್ ಅವರನ್ನು ಗುಜರಾತ್ ಟೈಟಾನ್ಸ್ 1.4 ಕೋಟಿ ರೂ.ಗೆ ಆಯ್ಕೆ ಮಾಡಿದೆ.
ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರನ್ನು ಮೂಲ ಬೆಲೆ 1 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿದೆ.
ಆಸ್ಟ್ರೇಲಿಯಾದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಆ್ಯರೊನ್ ಫಿಂಚ್ ,ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ, ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದ ಮಾಜಿ ನಾಯಕ ಇಯಾನ್ ಮಾರ್ಗನ್ ಸದ್ಯಕ್ಕೆ ಮಾರಾಟವಾಗದೆ ಉಳಿದಿದ್ದಾರೆ.