×
Ad

ಅರ್ಜುನ್‌ ತೆಂಡೂಲ್ಕರ್‌ ರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್

Update: 2022-02-13 20:49 IST

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ನ ಶ್ರೇಷ್ಠ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ರನ್ನು ಮುಂಬೈ ತಂಡ ಖರೀದಿಸಿದೆ. ಎಡಗೈ ವೇಗಿ ಆಗಿರುವ ಅರ್ಜುನ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ 30 ಲಕ್ಷ ರೂ.ಗೆ ಸಹಿ ಹಾಕಿದ್ದಾರೆ . 

ಸಚಿನ್‌ ತೆಂಡೂಲ್ಕರ್‌ ಅವರ ಮಾರ್ಗದರ್ಶನದಲ್ಲಿ ಅರ್ಜುನ್‌ ಮುಂಬೈಗಾಗಿ ಆಡಲಿದ್ದಾರೆ. ಗುಜರಾತ್‌ ಟೈಟಾನ್ಸ್‌ ಕೂಡಾ ಅರ್ಜುನ್‌ಗಾಗಿ ಒಂದು ಬಿಡ್‌ ಕರೆದಿತ್ತು. ಕಳೆದ ಸೀಸನ್‌ ನ ಬಿಡ್‌ ನಲ್ಲೂ ಅರ್ಜುನ್‌ ಮುಂಬೈ ಇಂಡಿಯನ್ಸ್‌ ಪಾಲಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News