ಅಮೆರಿಕ: ಗುಂಡುಹಾರಾಟದಲ್ಲಿ ರ್ಯಾಪ್ ಗಾಯಕ ಕೊಡಾಕ್ ಬ್ಲ್ಯಾಕ್ ಸಹಿತ 4 ಮಂದಿಗೆ ಗಾಯ

Update: 2022-02-13 18:22 GMT

ನ್ಯೂಯಾರ್ಕ್, ಫೆ.13: ನ್ಯೂಯಾರ್ಕ್ನ ರೆಸ್ಟಾರೆಂಟ್ ಒಂದರಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತ ಕೂಟದ ಸಂದರ್ಭ ನಡೆದ ಗುಂಡು ಹಾರಾಟದಲ್ಲಿ ಖ್ಯಾತ ರ್ಯಾಪ್ ಗಾಯಕ ಕೊಡಾಕ್ ಬ್ಲ್ಯಾಕ್ ಸಹಿತ 4 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರೆಸ್ಟಾರೆಂಟ್ನ ಹೊರಗೆ ಗುರುತಿಸಲಾಗದ ವ್ಯಕ್ತಿಗಳ ಮಧ್ಯೆ ಗಲಾಟೆ ಆರಂಭವಾಗಿದ್ದು ಹಲವು ಸುತ್ತು ಗುಂಡು ಹಾರಾಟ ನಡೆದಿದೆ. ಈ ಸಂದರ್ಭ 4 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ . ಗುಂಡು ಹಾರಾಟದ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಶಂಕಿತ ಆರೋಪಿಗಳ ಬಗ್ಗೆಯೂ ಮಾಹಿತಿ ಲಭಿಸಿಲ್ಲ ಎಂದು ಲಾಸ್ಏಂಜಲೀಸ್ ಪೊಲೀಸ್ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News