ಚೆಸ್: ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಗೆ ಸೋಲುಣಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ
Update: 2022-02-21 12:17 IST
ಚೆನ್ನೈ (ತಮಿಳುನಾಡು: 16 ರ ಹರೆಯದ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಇಲ್ಲಿ ನಡೆಯುತ್ತಿರುವ ಆನ್ ಲೈನ್ ರ್ಯಾಪಿಡ್ ಚೆಸ್ ಸ್ಪರ್ಧೆಯಾಗಿರುವ ಏರ್ಥಿಂಗ್ಸ್ ಮಾಸ್ಟರ್ಸ್ ಎಂಟನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸಿ ಬೆರಗುಗೊಳಿಸಿದರು.
ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್‌ನ ಮೊದಲ ದಿನ ಕಠಿಣ ಸವಾಲು ಎದುರಿಸಿದ ನಂತರ ಕಾರ್ಲ್‌ಸೆನ್ ಇದೀಗ ಅತ್ಯಂತ ಕಿರಿಯ ಆಟಗಾರನ ಎದುರು ಹಿನ್ನಡೆ ಎದುರಿಸಿದರು.
ಪ್ರಜ್ಞಾನಂದ ನಾರ್ವೆಯ ಚೆಸ್ ಪಟುವಿನ ವಿರುದ್ಧ ಮೊದಲ ಬಾರಿ ಗೆಲುವು ದಾಖಲಿಸಿದರು.