×
Ad

ಟ್ವೆಂಟಿ-20 ರ್ಯಾಂಕಿಂಗ್ ನಲ್ಲಿ ನಂ.1 ತಂಡವಾಗಿ ಹೊರಹೊಮ್ಮಿದ ಭಾರತ

Update: 2022-02-21 12:28 IST
Photo:twitter

ಕೋಲ್ಕತಾ(ಪಶ್ಚಿಮಬಂಗಾಳ): ವೆಸ್ಟ್ ಇಂಡೀಸ್ ವಿರುದ್ಧ ಮೂರನೇ  ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಟೀಮ್ ಇಂಡಿಯಾವು ಸೀಮಿತ ಓವರ್ ಕ್ರಿಕೆಟ್ ನಲ್ಲಿ ನಂ.1 ತಂಡವಾಗಿ ಹೊರಹೊಮ್ಮಿದೆ.

ವಿಂಡೀಸ್ ವಿರುದ್ಧಸರಣಿಯನ್ನು  3-0 ಅಂತರದಿಂದ ಗೆದ್ದುಕೊಂಡಿರುವ ರೋಹಿತ್ ಶರ್ಮಾ ಬಳಗವು 269 ರೇಟಿಂಗ್ ಪಾಯಿಂಟ್ಸ್ ಪಡೆದಿದೆ. ಇಂಗ್ಲೆಂಡ್ ಹಾಗೂ ಭಾರತವು ಒಂದೇ ರೀತಿಯ ರೇಟಿಂಗ್(269)ಪಡೆದಿವೆ.

ಪಾಕಿಸ್ತಾನ(266), ನ್ಯೂಝಿಲ್ಯಾಂಡ್(255) ಹಾಗೂ ದಕ್ಷಿಣ ಆಫ್ರಿಕಾ(253) ಅಗ್ರ-5 ಸ್ಥಾನದಲ್ಲಿವೆ.  ಆಸ್ಟ್ರೇಲಿಯ(249) ಆರನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News