ಉಕ್ರೇನ್ ಬಿಕ್ಕಟ್ಟು: ದೇಶದ ಹೊರಗೆ ಸೇನೆಯನ್ನು ಬಳಸಿಕೊಳ್ಳುವ ಪುಟಿನ್ ನಿರ್ಧಾರಕ್ಕೆ ಬೆಂಬಲ ನೀಡಿದ ರಶ್ಯ ಸಂಸದರು

Update: 2022-02-22 18:24 GMT
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 

ಮಾಸ್ಕೋ: ಉಕ್ರೇನಿನ ಪ್ರತ್ಯೇಕತಾವಾದಿಗಳಿಗೆ ಬೆಂಬಲಿಸಲು ದೇಶದ ಹೊರಗೆ ಸೇನೆಯನ್ನು ಬಳಸಿಕೊಳ್ಳುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರ್ಧಾರಕ್ಕೆ ರಷ್ಯ ಸಂಸತ್ ನ ಮೇಲ್ಮನೆ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಪುಟಿನ್ ನಿರ್ಧಾರವನ್ನು ಬೆಂಬಲಿಸಿ ಎಲ್ಲಾ 153 ಸೆನೆಟರ್ ಗಳೂ ಮತ ಚಲಾಯಿಸಿದ್ದು, ನಿರ್ಧಾರದ ವಿರುದ್ಧವಾಗಿ ಒಂದೇ ಒಂದು ಮತವೂ ಚಲಾವಣೆ ಆಗಿಲ್ಲ ಹಾಗೂ ಯಾವುದೇ ಸೆನೆಟರ್ ಪ್ರಕ್ರಿಯೆಯಿಂದ ದೂರ ಉಳಿದಿಲ್ಲ ಎಂದು ವರದಿಯಾಗಿದೆ.

ರಷ್ಯಾದ ವಿದೇಶಾಂಗ ಸಚಿವಾಲಯವು ಪೂರ್ವ ಉಕ್ರೇನ್ ಗೆ "ಸದ್ಯಕ್ಕೆ" ಸೈನ್ಯವನ್ನು ಕಳುಹಿಸಲು ಯೋಜಿಸುತ್ತಿಲ್ಲ ಎಂದು ಹೇಳಿದ್ದರೂ, 2014ರಿಂದ ಉಕ್ರೇನಿಯದ ಸೇನೆಯೊಂದಿಗೆ ಹೋರಾಡುತ್ತಿರುವ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಲು ದೇಶದ ಹೊರಗೆ ಸೈನ್ಯದ ಬಳಕೆಯನ್ನು ಅನುಮೋದಿಸಲು ಪುಟಿನ್ ಫೆಡರೇಶನ್ ಕೌನ್ಸಿಲ್ ಅನ್ನು ಕೇಳಿಕೊಂಡಿದ್ದರು. 

"ಮಾತುಕತೆಗಳು ಸ್ಥಗಿತಗೊಂಡಿವೆ. ಉಕ್ರೇನಿಯದ ನಾಯಕತ್ವವು ಹಿಂಸಾಚಾರ ಮತ್ತು ರಕ್ತಪಾತದ ಹಾದಿಯನ್ನು ತೆಗೆದುಕೊಂಡಿದೆ. ನಮಗೆ ಇದನ್ನು ಹೊರತುಪಡಿಸಿ ಬೇರೆ ಆಯ್ಕೆಯನ್ನು ಅವರು ಬಿಟ್ಟಿಲ್ಲ" ಎಂದು ಪುಟಿನ್ ಅವರ ಕೋರಿಕೆಯ ಮೇರೆಗೆ ನಡೆದ ಫೆಡರೇಶನ್ ಕೌನ್ಸಿಲ್ ನ ಅಧಿವೇಶನದಲ್ಲಿ ಉಪ ರಕ್ಷಣಾ ಸಚಿವ ನಿಕೊಲಾಯ್ ಪಾಂಕೋವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News