ಪ್ರೊ ಕಬಡ್ಡಿ ಲೀಗ್: ಪಾಟ್ನಾ -ಡೆಲ್ಲಿ ಫೈನಲ್‌ಗೆ

Update: 2022-02-23 17:51 GMT

 ಹೊಸದಿಲ್ಲಿ, ಫೆ.23: ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿರುವ ಡೆಲ್ಲಿ ದಬಾಂಗ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಮುಂದಿನ ಸುತ್ತಿನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಎದುರಿಸಲಿದೆ.

ಬುಧವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಯುಪಿ ಯೋಧಾ ತಂಡವನ್ನು 38-27 ಅಂಕಗಳ ಅಂತರದಿಂದ ಮಣಿಸಿದ ಪಾಟ್ನಾ ಶುಕ್ರವಾರ ನಡೆಯಲಿರುವ ಫೈನಲ್‌ಗೆ ಲಗ್ಗೆ ಇಟ್ಟಿತು.

2ನೇ ಸೆಮಿ ಫೈನಲ್‌ನಲ್ಲಿ ಡೆಲ್ಲಿ ತಂಡವು ಬೆಂಗಳೂರು ಬುಲ್ಸ್ ತಂಡವನ್ನು 40-35 ಅಂತರದಿಂದ ಸೋಲಿಸಿತು. ಡೆಲ್ಲಿ ಪರ ನವೀನ್ ಕುಮಾರ್ 14 ಅಂಕ ಗಳಿಸಿದರು. ಪರಾಭವಗೊಂಡಿರುವ ಬೆಂಗಳೂರು ಪರ ಪವನ್ ಕುಮಾರ್ 18 ಅಂಕ ಗಳಿಸಿ ಗಮನ ಸೆಳೆದರು.

ಲೀಗ್ ಹಂತದಲ್ಲಿ ಸಂಘಟಿತ ಪ್ರಯತ್ನದಿಂದ ಅಮೋಘ ಪ್ರದರ್ಶನ ನೀಡಿದ್ದ ಪಾಟ್ನಾ ತಂಡದ ಪರ ಸೆಮಿ ಫೈನಲ್‌ನಲ್ಲಿ ಗುಮಾನ್ ಸಿಂಗ್(8 ಅಂಕ)ಹಾಗೂ ಸಚಿನ್(7 ಅಂಕ) ಒಟ್ಟಿಗೆ 15 ಅಂಕ ಕಲೆ ಹಾಕಿದರು. ಯುಪಿ ಪರವಾಗಿ ಶ್ರೀಕಾಂತ್ ಜಾಧವ್(10 ಅಂಕ)ಯಶಸ್ವಿ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News