×
Ad

ಐಪಿಎಲ್ ಮಾದರಿಯಲ್ಲಿ ಬದಲಾವಣೆ: 10 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜನೆ

Update: 2022-02-25 17:53 IST

ಹೊಸದಿಲ್ಲಿ, ಫೆ.25: ಮುಂಬರುವ 2022ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದ್ದು, 10 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿ ಗುಂಪಿನಲ್ಲಿ 5 ತಂಡಗಳು ಇರುತ್ತವೆ. ಆದರೆ, ಪ್ರತಿ ತಂಡವು ಈ ಹಿಂದಿನಂತೆ ತಲಾ 14 ಪಂದ್ಯಗಳನ್ನಾಡುತ್ತವೆ.

ಬಿಸಿಸಿಐ ಶುಕ್ರವಾರ ಬಿಡುಗಡೆ ಮಾಡಿರುವ ಗ್ರೂಪ್‌ಗಳ ಪ್ರಕಾರ, 'ಎ' ಗುಂಪಿನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೊ ಸೂಪರ್ ಜೈಂಟ್ಸ್‌ಗಳಿವೆ. 'ಬಿ' ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಇದೆ.

ಈ ತನಕ ಐಪಿಎಲ್‌ನಲ್ಲಿ 8 ತಂಡಗಳಿದ್ದವು. ಪ್ರತಿ ತಂಡಗಳು ರೌಂಡ್ ರಾಬಿನ್ ಲೀಗ್ ಹಂತದಲ್ಲಿ ತಲಾ ಎರಡು ಬಾರಿ ಮುಖಾಮುಖಿಯಾಗುತ್ತಿದ್ದವು. ಐಪಿಎಲ್‌ನಲ್ಲಿ ಈಗಿನ ಗ್ರೂಪ್ ಲೀಗ್ ಮಾದರಿಯು ಹೊಸತೇನಲ್ಲ. ಒಂದು ದಶಕದ ಹಿಂದೆ ಪುಣೆ ವಾರಿಯರ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ತಂಡಗಳು ಸೇರ್ಪಡೆಯಾದಾಗ ಗ್ರೂಪ್ ಮಾದರಿ ಇತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News