ಮೂರನೇ ಟ್ವೆಂಟಿ-20: ಭಾರತ ತಂಡದ ಗೆಲುವಿಗೆ 147 ರನ್ ಸವಾಲು

Update: 2022-02-27 15:57 GMT
Photo:BCCI

ಧರ್ಮಶಾಲಾ, ಫೆ. 27: ನಾಯಕ ದಸುನ್ ಶನಕ(ಔಟಾಗದೆ 74, 38 ಎಸೆತ)ಕೆಳ ಕ್ರಮಾಂಕದಲ್ಲಿ ಗಳಿಸಿದ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ಭಾರತ ತಂಡಕ್ಕೆ ಮೂರನೇ ಟ್ವೆಂಟಿ-20 ಪಂದ್ಯದ ಗೆಲುವಿಗೆ 147 ರನ್ ಗುರಿ ನೀಡಿದೆ.

ರವಿವಾರ ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು.

ಶ್ರೀಲಂಕಾದ ಆರಂಭ ಉತ್ತಮವಾಗಿರಲಿಲ್ಲ. ಲಂಕೆಯು 60 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಆರನೇ ವಿಕೆಟ್‌ಗೆ 86 ರನ್ ಜೊತೆಯಾಟ ನಡೆಸಿದ ಶನಕ(ಔಟಾಗದೆ 74, 38 ಎಸೆತ, 9 ಬೌಂಡರಿ, 2 ಸಿಕ್ಸರ್)ಹಾಗೂ ಚಾಮಿಕ ಕರುಣರತ್ನೆ(ಔಟಾಗದೆ 12)ತಂಡದ ಮೊತ್ತವನ್ನು 146ಕ್ಕೆ ತಲುಪಿಸಿದರು.

ಶನಕ ಅವರು ಅವೇಶ್ ಖಾನ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿ ಕೇವಲ 29 ಎಸೆತಗಳಲ್ಲಿ ಮೂರನೇ ಬಾರಿ ಅರ್ಧಶತಕವನ್ನು ಸಿಡಿಸಿದರು. ಭಾರತದ ಪರ ಅವೇಶ್ ಖಾನ್ (2-23)ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಸಿರಾಜ್(1-22), ಹರ್ಷಲ್ ಪಟೇಲ್(1-29) ಹಾಗೂ ರವಿ ಬಿಷ್ಣೋಯಿ(1-32)ತಲಾ ಒಂದು ವಿಕೆಟ್‌ಗಳನ್ನು ಪಡೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News