ಇಂದಿನಿಂದ ನ್ಯೂಝಿಲ್ಯಾಂಡ್‌ನಲ್ಲಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಆರಂಭ

Update: 2022-03-04 06:37 GMT

ದುಬೈ, ಮಾ.3: ನ್ಯೂಝಿಲ್ಯಾಂಡ್ ಆತಿಥ್ಯದಲ್ಲಿ ಶುಕ್ರವಾರದಿಂದ ಮಹಿಳಾ ಕ್ರಿಕೆಟ್ ವಿಶ್ವಕಪ್ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಝಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ಸೆಣಸಾಡಲಿವೆ. ಭಾರತವು ರವಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್ ಟೂರ್ನಿಯು ಮಾರ್ಚ್ 4ರಿಂದ ಎಪ್ರಿಲ್ 3ರ ತನಕ ನಡೆಯಲಿದೆ.

 ಮಹಿಳಾ ವಿಶ್ವಕಪ್‌ನ ಎಲ್ಲ ಪಂದ್ಯಗಳಲ್ಲಿ ಅಂಪೈರ್ ತೀರ್ಪು ಪರಾಮರ್ಶೆ ವ್ಯವಸ್ಥೆ (ಡಿಆರ್‌ಎಸ್) ಬಳಸಲಾಗುವುದು. ಪ್ರತಿಷ್ಠಿತ ಟೂರ್ನಮೆಂಟ್‌ನ ಎಲ್ಲ ಪಂದ್ಯಗಳನ್ನು ಪ್ರಸಾರ ಪಾಲುದಾರರು ವಿಶ್ವದಾದ್ಯಂತ ನೇರ ಪ್ರಸಾರ ಮಾಡಲಿದ್ದಾರೆ ಎಂದು ಐಸಿಸಿ ತಿಳಿಸಿದೆ. ಇದೀಗ ಎರಡನೇ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಡಿಆರ್‌ಎಸ್ ಬಳಸಲಾಗುತ್ತಿದೆ. 2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಮೊದಲ ಬಾರಿ ಈ ವ್ಯವಸ್ಥೆ ಬಳಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News