ದಾಳಿಯ ಸಂದರ್ಭ ಅಣುಸ್ಥಾವರದಿಂದ ವಿಕಿರಣ ಸೋರಿಕೆಯಾಗಿಲ್ಲ:ಉಕ್ರೇನ್

Update: 2022-03-04 18:19 GMT
photo courtesy:twitter

ಕೀವ್, ಮಾ.4: ರಶ್ಯಾ ಪಡೆಗಳ ದಾಳಿಯ ಸಂದರ್ಭ ಬೆಂಕಿ ಹತ್ತಿಕೊಂಡಿದ್ದ ಝಪೋರಿಜ್‌ಝಿಯಾ ಅಣುಸ್ಥಾವರದಿಂದ ವಿಕಿರಣ ಸೋರಿಕೆ ಪತ್ತೆಯಾಗಿಲ್ಲ ಎಂದು ಉಕ್ರೇನ್‌ನ ಪರಮಾಣು ನಿಯಂತ್ರಣ ಪ್ರಾಧಿಕಾರ ಶುಕ್ರವಾರ ಹೇಳಿದೆ.

ದಾಳಿಯಿಂದ ಬೆಂಕಿ ಹತ್ತಿಕೊಂಡ ಬಳಿಕ ವಿಕಿರಣ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ ಎಂದು ಉಕ್ರೇನ್ ಪರಮಾಣು ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ದೃಢಪಡಿಸಿರುವುದಾಗಿ ವರದಿಯಾಗಿದೆ.

ಅಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಿದ್ದು ಉಕ್ರೇನ್ ಸೇನೆ: ರಶ್ಯಾ ಹೇಳಿಕೆ

ಉಕ್ರೇನ್‌ನ ವಿಧ್ವಂಸಕರು ಝಪೋರಿಜ್‌ಝಿಯಾದ ಅಣುಸ್ಥಾವರಕ್ಕೆ ಬೆಂಕಿ ಹಚ್ಚಿದ್ದು ಇದೊಂದು ಬೃಹತ್ ಪ್ರಚೋದನೆ ಕ್ರಮವಾಗಿದೆ ಎಂದು ರಶ್ಯಾದ ರಕ್ಷಣಾ ಇಲಾಖೆ ಶುಕ್ರವಾರ ಆರೋಪಿಸಿದೆ.
 
ಶುಕ್ರವಾರ ಬೆಳಗ್ಗೆ ಅಣುಸ್ಥಾವರದ ಮೇಲೆ ದಾಳಿ ನಡೆಸಿದ ರಶ್ಯಾ ಪಡೆ, ಇದಕ್ಕೆ ತಾಗಿಕೊಂಡಿರುವ 5 ಮಹಡಿಯ ತರಬೇತಿ ಶಾಲೆಗೆ ಬೆಂಕಿ ಹಚ್ಚಿದ್ದಾರೆ ಎಂದು ಉಕ್ರೇನ್ ಹೇಳಿತ್ತು. ಈ ಘಟನೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೆ ಈ ಹೇಳಿಕೆಯನ್ನು ನಿರಾಕರಿಸಿರುವ ರಶ್ಯಾ, ಈ ಪ್ರದೇಶ ಫೆಬ್ರವರಿ 28ರಿಂದ ರಶ್ಯಾದ ನಿಯಂತ್ರಣದಲ್ಲಿದೆ. ಆದರೆ ಗುರುವಾರ ರಾತ್ರಿ, ಅಣುಸ್ಥಾವರಕ್ಕೆ ಹೊಂದಿಕೊಂಡಿರುವ ಪ್ರದೇಶಕ್ಕೆ ನುಗ್ಗಿದ ಉಕ್ರೇನ್ ಪ್ರಜೆಗಳು, ಬೃಹತ್ ಪ್ರಚೋದನೆಯ ಪ್ರಯತ್ನ ನಡೆಸಿದ್ದು ಇಲ್ಲಿದ್ದ ರಶ್ಯಾದ ಕಾವಲುಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಶ್ಯಾದ ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News