ದ್ವಿತೀಯ ಟೆಸ್ಟ್: ಬುಮ್ರಾಗೆ ಐದು ವಿಕೆಟ್, ಶ್ರೀಲಂಕಾ ಆಲೌಟ್, ಭಾರತಕ್ಕೆ ಮುನ್ನಡೆ

Update: 2022-03-13 09:40 GMT

ಬೆಂಗಳೂರು: ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ (5-24)ನೇತೃತ್ವದ ಭಾರತದ ಬೌಲರ್ ಗಳ ಶಿಸ್ತುಬದ್ದ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನವಾದ ರವಿವಾರ ತನ್ನ ಮೊದಲ ಇನಿಂಗ್ಸ್ ನಲ್ಲಿ 35.5 ಓವರ್ ಗಳಲ್ಲಿ  ಕೇವಲ 109 ರನ್ ಗೆ ಆಲೌಟಾಗಿದೆ.

ಮೊದಲ ಇನಿಂಗ್ಸ್ ನಲ್ಲಿ 252 ರನ್ ಗಳಿಸಿದ್ದ ಭಾರತವು 143 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ.  ಲಂಕೆಯ ಪರ ಹಿರಿಯ ಬ್ಯಾಟರ್ ಆ್ಯಂಜೆಲೊ ಮ್ಯಾಥ್ಯೂಸ್(43 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.

ಬುಮ್ರಾ ಸ್ವದೇಶಿ ನೆಲದಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಆರ್. ಅಶ್ವಿನ್ (2-30)ಹಾಗೂ ಮುಹಮ್ಮದ್ ಶಮಿ (2-18)ತಲಾ 2 ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News