ವಿಶ್ವಕಪ್ ಕ್ರಿಕೆಟ್: ನ್ಯೂಝಿಲ್ಯಾಂಡ್ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ

Update: 2022-03-18 05:00 GMT

ವೆಲ್ಲಿಂಗ್ಟನ್: ರೋಚಕವಾಗಿ ಸಾಗಿದ ಲೀಗ್ ಹಂತದ ಪಂದ್ಯದಲ್ಲಿ ಆತಿಥೇಯ ನ್ಯೂಝಿಲ್ಯಾಂಡ್ ತಂಡವನ್ನು 2 ವಿಕೆಟ್‌ಗಳ ಅಂತರದಿಂದ ಮಣಿಸಿರುವ ದಕ್ಷಿಣ ಆಫ್ರಿಕಾ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದೆ.

  ಗುರುವಾರ ನಡೆದ ಪಂದ್ಯದಲ್ಲಿ ನಾಯಕಿ ಸೋಫಿ ಡಿವೈನ್ ಅವರು 93 ರನ್(101 ಎಸೆತ, 12 ಬೌಂಡರಿ, 1 ಸಿಕ್ಸರ್) ಗಳಿಸಿದ ಹೊರತಾಗಿಯೂ ವೇಗಿಗಳಾದ ಅಯಾಬಾಂಗಾ ಖಾಕಾ(3-31), ಶಬ್ನಮ್ ಇಸ್ಮಾಯೀಲ್(3-27) ಹಾಗೂ ಮರಿಝನ್ನೆ ಕಾಪ್(2-44) ಶಿಸ್ತುಬದ್ಧ ಬೌಲಿಂಗ್ ದಾಳಿಸಿ ನಡೆಸಿ ನ್ಯೂಝಿಲ್ಯಾಂಡ್ ತಂಡವನ್ನು 47.5 ಓವರ್‌ಗಳಲ್ಲಿ 228 ರನ್‌ಗೆ ನಿಯಂತ್ರಿಸಿದರು.

  ಗೆಲ್ಲಲು 229 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ಲಾರಾ ವೊಲ್ವಾರ್ಡ್ಟ್(67 ರನ್)ಹಾಗೂ ನಾಯಕಿ ಸುನೆ ಲುಸ್(51)ಸಾಂದರ್ಭಿಕ ಅರ್ಧಶತಕ ಹಾಗೂ ಕಾಪ್(ಔಟಾಗದೆ 34)ಸಮಯೋಚಿತ ಆಟದ ನೆರವಿನಿಂದ 49.3 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 229 ರನ್ ಗಳಿಸಿತು. ಈ ಮೂಲಕ ಟೂರ್ನಮೆಂಟ್‌ನಲ್ಲಿ ನಾಲ್ಕನೇ ಗೆಲುವು ದಾಖಲಿಸಿತು. ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿ ಕೊಂಡಿದೆ. 5 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಜಯ ಸಾಧಿಸಿರುವ ನ್ಯೂಝಿಲ್ಯಾಂಡ್‌ತಂಡವು 4ನೇ ಸ್ಥಾನದಲ್ಲಿ ಮುಂದುವರಿದಿದೆ. ಸೆಮಿ ಫೈನಲ್ ರೇಸ್‌ನಲ್ಲಿ ಉಳಿಯಬೇಕಾದರೆ ಉಳಿದಿರುವ 2 ಪಂದ್ಯಗಳಲ್ಲಿ ಜಯಶಾಲಿಯಾಗ ಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News