ಬಾಂಗ್ಲಾದೇಶವನ್ನು 4 ರನ್‌ನಿಂದ ಸೋಲಿಸಿದ ವೆಸ್ಟ್ಇಂಡೀಸ್

Update: 2022-03-19 04:23 GMT

ವೆಲ್ಲಿಂಗ್ಟನ್: ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಶುಕ್ರವಾರ ನಡೆದ ಕನಿಷ್ಠ ಮೊತ್ತದ ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತದಿಂದ ಚೇತರಿಸಿಕೊಂಡ ವೆಸ್ಟ್

ಇಂಡೀಸ್ ತಂಡ ಬಾಂಗ್ಲಾದೇಶವನ್ನು ಕೊನೆಯ ಓವರ್‌ನಲ್ಲಿ 4 ರನ್ ಅಂತರದಿಂದ ಸೋಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ವೆಸ್ಟ್‌ಇಂಡೀಸ್ ಒಂದು ಹಂತದಲ್ಲಿ 70 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಔಟಾಗದೆ 53 ರನ್ ಗಳಿಸಿದ ಶೆಮೈನ್ ಕ್ಯಾಂಪ್‌ಬೆಲ್ ವಿಂಡೀಸ್ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕೆ್ಕ 140 ರನ್ ಗಳಿಸಲು ನೆರವಾದರು.

ಗೆಲ್ಲಲು 141 ರನ್ ಬೆನ್ನಟ್ಟಿದ್ದ ಬಾಂಗ್ಲಾದೇಶ 49.3 ಓವರ್‌ಗಳಲ್ಲಿ 136 ರನ್‌ಗೆ ಆಲೌಟಾಯಿತು. ನಾಹಿದಾ ಅಖ್ತರ್ ಔಟಾಗದೆ 25 ರನ್ ಹಾೂ ನಿಗಾರ್ ಸುಲ್ತಾನ 25 ರನ್ ಗಳಿಸಿದರು. ಹೇಲಿ ಮ್ಯಾಥ್ಯೂಸ್(4-15) ಯಶಸ್ವಿ ಬೌಲರ್ ಎನಿಸಿಕೊಂಡರು. ಅಫಿ ಫ್ಲೆಚರ್ (3-29) ಹಾಗೂ ಸ್ಟಫಾನಿ ಟೇಲರ್(3-29)ತಲಾ 3 ವಿಕೆಟ್‌ಗಳನ್ನು ಹಂಚಿಕೊಂಡರು.

ಬಾಂಗ್ಲಾದೇಶ 60 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ ಅಂತಿಮ ಓವರ್ ತನಕ ತನ್ನ ಹೋರಾಟವನ್ನು ಮುಂದುವರಿಸಿ ಕೇವಲ 4 ರನ್‌ನಿಂದ ಸೋಲನುಭವಿಸಿತು.

ವೆಸ್ಟ್‌ಇಂಡೀಸ್ ಟೂರ್ನಿಯಲ್ಲಿ ಈ ತನಕ ಆಡಿರುವ 5 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿತು. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. 4 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯಶಾಲಿಯಾಗಿರುವ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News