ವಲಸಿಗರಿದ್ದ ನೌಕೆ ಮುಳುಗಿ ಕನಿಷ್ಟ 20 ಮಂದಿ ಮೃತ್ಯು

Update: 2022-03-20 18:03 GMT
photo courtesy:twitter

ಟ್ಯೂನಿಸ್, ಮಾ.20: ಮೆಡಿಟರೇನಿಯನ್ ಸಮುದ್ರದ ಮೂಲಕ ಇಟಲಿಗೆ ಪ್ರಯಾಣಿಸುತ್ತಿದ್ದ ವಲಸಿಗರಿದ್ದ ನೌಕೆಯು ಟ್ಯುನೀಷಿಯಾದ ಬಳಿ ಸಮುದ್ರದಲ್ಲಿ ಮುಳುಗಿದ್ದು ಕನಿಷ್ಟ 20 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಶುಕ್ರವಾರ ದುರಂತ ಸಂಭವಿಸಿದ್ದು ಅದೇ ದಿನ 12 ಮೃತದೇಹಗಳನ್ನು ರಕ್ಷಣಾ ಪಡೆಯವರು ಪತ್ತೆಹಚ್ಚಿದ್ದರು. ಶನಿವಾರ ಮತ್ತೆ 8 ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟ್ಯುನೀಷಿಯಾ ಹಾಗೂ ನೆರೆಯ ದೇಶ ಲಿಬಿಯಾದಿಂದ ಸಾವಿರಾರು ವಲಸಿಗರು ಯುರೋಪ್‌ನತ್ತ ವಲಸೆ ಹೋಗುತ್ತಾರೆ. ಆದರೆ ಸಮುದ್ರದಲ್ಲಿನ ಪ್ರಯಾಣದ ಸಂದರ್ಭ ಎದುರಾಗುವ ತೊಂದರೆಯಿಂದ ಮೃತಪಡುವವರ ಸಂಖ್ಯೆಯೂ ಅಧಿಕವಾಗಿದೆ.
 
ಮಧ್ಯ ಮೆಡಿಟರೇನಿಯನ್ ಮಾರ್ಗದ ಮೂಲಕವಾಗಿ ಯುರೋಪ್‌ನತ್ತ ಪ್ರಯಾಣಿಸುವ ಪ್ರಯತ್ನದಲ್ಲಿ 2021ರಲ್ಲಿ ಸುಮಾರು 1,300 ವಲಸಿಗರು ಮತ್ತು ನಿರಾಶ್ರಿತರು ಮೃತಪಟ್ಟಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಘಟಕ ಯುಎನ್‌ಎಚ್‌ಸಿಆರ್ ವರದಿ ಮಾಡಿದೆ. 2014ರಿಂದ ಸುಮಾರು 18,000 ವಲಸಿಗರು ಮೃತಪಟ್ಟಿರುವುದಾಗಿ ವಲಸಿಗರಿಗಾಗಿನ ಅಂತರಾಷ್ಟ್ರೀಯ ಸಂಘಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News