ಎರಡು ವಾರದಲ್ಲಿ ಎರಡನೇ ವಿಶ್ವದಾಖಲೆ ಸೃಷ್ಟಿಸಿದ ಪೋಲ್‍ವಾಲ್ಟ್ ಪಟು

Update: 2022-03-21 02:17 GMT
 (ಫೋಟೊ: AFP/ANDREJ ISAKOVIC)

ಬೆಲ್‌ ಗ್ರೇಡ್: ಎರಡು ವಾರದಲ್ಲಿ ಎರಡನೇ ವಿಶ್ವದಾಖಲೆ ಸೃಷ್ಟಿಸುವ ಮೂಲಕ ಸ್ವೀಡನ್‍ನ ಪೋಲ್‍ ವಾಲ್ಟ್ ಪಟು ಡ್ಯುಪ್ಲಂಟೀಸ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಒಳಾಂಗಣ ಚಾಂಪಿಯನ್‍ಶಿಪ್‍ನಲ್ಲಿ ಗಮನ ಸೆಳೆದರು.

ಆದರೆ ನಾರ್ವೆಯ ಜಾಕೋಬ್ ಇಂಗೆಬ್ರೈಟ್ಸೆನ್ 1500 ಮೀಟರ್‍ನಲ್ಲಿ ಪ್ರಾಬಲ್ಯ ಮುಂದುವರಿಸುವ ಕನಸು ನುಚ್ಚು ನೂರಾಯಿತು.

ಅಮೆರಿಕ ಸಂಜಾತ ಡ್ಯುಪ್ಲಂಟೀಸ್, ತಮ್ಮ 6.20 ಮೀಟರ್ ಎತ್ತರ ಜಿಗಿಯುವ ಮೂಲಕ ಎರಡು ವಾರಗಳ ಹಿಂದೆ ತಾವೇ ಸ್ಥಾಪಿಸಿದ್ದ ವಿಶ್ವದಾಖಲೆ ಅಳಿಸಿದರು. ಹಿಂದಿನ ಸಾಧನೆಗಿಂತ ಒಂದು ಸೆಂಟಿಮೀಟರ್ ಅಧಿಕ ಎತ್ತರಕ್ಕೆ ಡ್ಯುಪ್ಲಂಟೀಸ್ ಹಾರುವ ಮೂಲಕ "ಕನಸಿನ ಸಾಧನೆ" ಮಾಡಿದರು.

ಪ್ರತಿಸ್ಪರ್ಧಿಗಳಾಗಿದ್ದ ಕ್ರಿಸ್ ನೆಲ್ಸನ್ ಮತ್ತು ತೈಗೊ ಬ್ರೆಜ್ ತೀರಾ ಹಿಂದುಳಿದರೂ, ಡ್ಯುಪ್ಲಂಟೀಸ್, ದಾಖಲೆ ಎತ್ತರವನ್ನು ಸಾಧಿಸಲು ಯಾವುದೇ ಅಡ್ಡಿಯಾಗಲಿಲ್ಲ. ಜುಲೈನಲ್ಲಿ ನಡೆಯಲಿರುವ ವಿಶ್ವ ಹೊರಾಂಗಣ ಪ್ರಶಸ್ತಿಯತ್ತ ಈ ಸ್ವಿಸ್ ಆಟಗಾರ ಇದೀಗ ದೃಷ್ಟಿ ನೆಟ್ಟಿದ್ದಾರೆ,

"ಎರಡು ವಾರಗಳಲ್ಲಿ ಎರಡು ಬಾರಿ ವಿಶ್ವದಾಖಲೆ ಮುರಿಯಲು ನಾನು ಗೊಣಗುವಂತಿಲ್ಲ. ನನ್ನ ಮಿತಿ ಆಗಸ. ಮತ್ತೊಂದು ಪ್ರಶಸ್ತಿ, ಮತ್ತೊಂದು ವಿಶ್ವದಾಖಲೆ; ನಿಜಕ್ಕೂ ಸುದಿನ,. ಮೊದಲ ಬಾರಿಗೆ 6.20 ಮೀಟರ್. ಇದನ್ನು ಬಣ್ಣಿಸುವುದು ಅಸಾಧ್ಯ. ಆ ಕನಸನ್ನಷ್ಟೇ ಕಾಣಬಹುದು" ಎಂದು ಬಣ್ಣಿಸಿದರು.

ಆದರೆ 1500 ಮೀಟರ್ ಓಟದಲ್ಲಿ ಪ್ರಾಬಲ್ಯ ಮುಂದುವರಿಸುವ ಜಾಕೋಬ್ ಇಂಗೆಬ್ರೈಟ್ಸೆನ್ ಕನಸಿಗೆ ಇಥಿಯೋಪಿಯಾದ ಸ್ಯಾಮ್ಯುಯೆಲ್ ಟೆಫೇರಾ ಅಡ್ಡಿಯಾದರು. ಕಳೆದ ವಾರ ವಿಶ್ವದಾಖಲೆ ಸ್ಥಾಪಿಸಿದ್ದ ಜಾಕೋಬ್ ಅವರ ಮೇಲೆ ಎಲ್ಲರ ದೃಷ್ಟಿ ಇತ್ತು. ಆದರೆ ಒಲಿಂಪಿಕ್ ಚಾಂಪಿಯನ್ ವಿರುದ್ಧದ ಸವಾಲನ್ನು ಸ್ವೀಕರಿಸಿದ ಟೆಫೇರಾ 0.25 ಸೆಕೆಂಡ್‍ಗಳಿಂದ ಜಾಕೋಬ್ ಅವರನ್ನು ಹಿಂದಿಕ್ಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News