ಮಹಿಳಾ ವಿಶ್ವಕಪ್ ಕ್ರಿಕೆಟ್: ಬಾಂಗ್ಲಾ ವಿರುದ್ಧ ಭಾರತ ಎಚ್ಚರಿಕೆಯ ಆಟ

Update: 2022-03-22 03:24 GMT

ಹ್ಯಾಮಿಲ್ಟನ್: ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಹಂತದಲ್ಲಿ ಭಾರತ ತಂಡ ಮಂಗಳವಾರ ಬಾಂಗ್ಲಾದೇಶದ ವಿರುದ್ಧ ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚಿನ ವರದಿಗಳು ಬಂದಾಗ ಭಾರತ 37.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು.‌

ಯಸ್ತಿಕಾ ಭಾಟಿಯಾ (40) ಮತ್ತು ರಿಚಾ ಘೋಶ್ (25) ಕ್ರೀಸಿನಲ್ಲಿದ್ದಾರೆ. ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ‌

ನಾಕೌಟ್‍ಗೆ ಅರ್ಹತೆ ಪಡೆಯಲು ಸಿಕ್ಕಿದ ಅವಕಾಶಗಳನ್ನು ಪದೇ ಪದೇ ವ್ಯರ್ಥಪಡಿಸಿಕೊಂಡಿರುವ ಭಾರತ ತಂಡ ಇಂದು ಕೂಡಾ ನೀರಸ ಪ್ರದರ್ಶನ ನೀಡಿದೆ. ನಾಕೌಟ್ ಹಂತಕ್ಕೇರುವ ಆಸೆ ಜೀವಂತ ಇರಿಸಿಕೊಳ್ಳಬೇಕಾದರೆ ಭಾರತ ಮುಂದಿನ ಎರಡೂ ಪಂದ್ಯಗಳನ್ನು ಅಂದರೆ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಜಯಿಸಬೇಕಿದೆ.

ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (30) ಮತ್ತು ಶಫಾಲಿ ವರ್ಮಾ (42) ಎಚ್ಚರಿಕೆಯಿಂದ ಇನಿಂಗ್ಸ್ ಆರಂಭಿಸಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ನಾಯಕಿ ಮಿಥಾಲಿ ರಾಜ್ ಶೂನ್ಯಕ್ಕೆ ಔಟ್ ಆಗಿ ಭಾರತೀಯ ಪಾಳಯದಲ್ಲಿ ನಿರಾಸೆಗೆ ಕಾರಣರಾದರು. ಬಾಂಗ್ಲಾದೇಶದ ಪರ ರಿತು ಮೋನಿ 6 ಓವರ್ ಗಳಲ್ಲಿ 2 ಮೇಡನ್ ಸಹಿತ 23 ರನ್‍ಗಳಿಗೆ 2 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News