ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್ ಬಂಕ್ ಗಳಲ್ಲಿ ಸೇನೆ ನಿಯೋಜನೆ

Update: 2022-03-22 17:40 GMT

ಸಾಂದರ್ಭಿಕ ಚಿತ್ರ

 ಕೊಲಂಬೊ, ಮಾ.22: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತೈಲದ ಕೊರತೆಯ ಸಮಸ್ಯೆಯಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಜನತೆ ಮಾರುದ್ದದ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಜನರನ್ನು ನಿಯಂತ್ರಿಸಲು ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಯೋಧರನ್ನು ನಿಯೋಜಿಸುವಂತೆ ಸರಕಾರ ಸೇನೆಗೆ ಸೂಚಿಸಿದೆ ಎಂದು ವರದಿಯಾಗಿದೆ.

    ವಿದೇಶಿ ವಿನಿಮಯ ಸಂಗ್ರಹದಲ್ಲಿ ಉಂಟಾಗಿರುವ ಕೊರತೆಯಿಂದ ಆಹಾರ, ಔಷಧ ಮತ್ತು ತೈಲ ಸೇರಿದಂತೆ ಅಗತ್ಯ ವಸ್ತುಗಳ ಆಮದಿಗೆ ಶ್ರೀಲಂಕಾ ಸಂಕಷ್ಟ ಪಡುತ್ತಿದೆ. ಈ ಕಾರಣ ಅಗತ್ಯವಸ್ತುಗಳ ಕೊರತೆ ಎದುರಾಗಿದೆ. ಈ ಮಧ್ಯೆ, ತೈಲ ದಾಸ್ತಾನೂ ಬರಿದಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ಜನರು ಮೈಲುದ್ದದ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ರವಿವಾರ ಸರತಿ ಸಾಲಿನಲ್ಲಿ ನಿಂತಿದ್ದ 3 ಹಿರಿಯ ನಾಗರಿಕರು ಕುಸಿದು ಬಿದ್ದು ಮೃತಪಟ್ಟ ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರಕಾರ ಪೆಟ್ರೋಲ್ ಬಂಕ್‌ಗಳಲ್ಲಿ ಸೇನೆಯ ಯೋಧರನ್ನು ನಿಯೋಜಿಸಲು ನಿರ್ಧರಿಸಿದೆ. ಸರಕಾರಿ ಸ್ವಾಮ್ಯದ ಪ್ರತೀ ಪೆಟ್ರೋಲ್ ಬಂಕ್‌ಗಳಲ್ಲಿ ಕನಿಷ್ಟ 2 ಯೋಧರನ್ನು ನಿಯೋಜಿಸಲಾಗುವುದು . ಜನರಿಗೆ ನೆರವಾಗಲು ಯೋಧರನ್ನು ನಿಯೋಜಿಸಲಾಗಿದೆ, ಅವರ ಮಾನವ ಹಕ್ಕುಗಳನ್ನು ಕಸಿಯಲು ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News