ಅರ್ಜೆಂಟೀನಾ: ಪೊಲೀಸರಿಗೆ ಯೋಗ ತರಬೇತಿ ಆರಂಭ

Update: 2022-03-24 17:15 GMT

ಬ್ಯೂನಸ್ ಐರಿಸ್, ಮಾ.24: ಪೊಲೀಸರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಅರ್ಜೆಂಟೀನಾ ಫೆಡರಲ್ ಪೊಲೀಸ್ ಹಾಗೂ ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಯೋಗದಲ್ಲಿ ಯೋಗ ತರಬೇತಿ ಯೋಜನೆಯನ್ನು ಆರಂಭಿಸಲಾಗಿದೆ.

  ಅರ್ಜೆಂಟೀನಾಕ್ಕೆ ಭಾರತದ ರಾಯಭಾರಿ ದಿನೇಶ್ ಭಾಟಿಯಾ ಹಾಗೂ ಅರ್ಜೆಂಟೀನಾ ಫೆಡರಲ್ ಪೊಲೀಸ್ ವಿಭಾಗದ ಮುಖ್ಯಸ್ಥ ಜುವಾನ್ ಸಿ ಹೆರ್ನಾಂಡೆಸ್ ಕಾರ್ಯಕ್ರಮ ಉದ್ಘಾಟಿಸಿದರು ಎಂದು ಅರ್ಜೆಂಟೀನಾದ ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಯೋಗದಿಂದ ಲಭಿಸುವ ಹಲವು ಆರೋಗ್ಯ ಪ್ರಯೋಜನಗಳನ್ನು ಉಲ್ಲೇಖಿಸಿ ಭಾರತ ಸರಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಜನಪ್ರಿಯಗೊಳಿಸುವ ಉಪಕ್ರಮ ಆರಂಭಿಸಿದೆ.
2022ರ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಬಂಧಿಸಿ ಹೊಸದಿಲ್ಲಿಯಲ್ಲಿ ಮಂಗಳವಾರ ಸಚಿವಾಲಯ ಮಟ್ಟದ 2ನೇ ಸಭೆ ನಡೆದಿದೆ ಎಂದು ರಾಯಭಾರ ಕಚೇರಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News