×
Ad

ತನ್ನ ವ್ಯಂಗ್ಯಚಿತ್ರ ಪೋಸ್ಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ವಿರುದ್ಧ ನಾಯಕ ಸ್ಯಾಮ್ಸನ್ ಆಕ್ರೋಶ!

Update: 2022-03-26 12:23 IST

ಮುಂಬೈ: ಐಪಿಎಲ್ 2022 ಆರಂಭವಾಗುವ ಮೊದಲೇ ರಾಜಸ್ಥಾನ ರಾಯಲ್ಸ್ ಮೈದಾನದಿಂದ ಹೊರಗೆ ಆಗಿರುವ ಘಟನೆಯಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಫ್ರಾಂಚೈಸಿಯ ಸಾಮಾಜಿಕ ಮಾಧ್ಯಮ ತಂಡವು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳುವ ತನ್ನ ಅಭಿಯಾನದ ಭಾಗವಾಗಿ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಲು ನಿರ್ಧರಿಸಿತು. ಆದರೆ ಇದು ಸ್ಯಾಮ್ಸನ್‌ ಆಕ್ರೋಶಕ್ಕೆ ಕಾರಣವಾಗಿದೆ. ಸ್ಯಾಮ್ಸನ್ ಟ್ವಿಟರ್ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

"ಸ್ನೇಹಿತರು ಇದನ್ನೆಲ್ಲಾ ಮಾಡುವುದು ಸರಿ, ಆದರೆ ತಂಡಗಳು ವೃತ್ತಿಪರವಾಗಿರಬೇಕು" ಎಂದು ಸ್ಯಾಮ್ಸನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇದು ತಂಡ ಹಾಗೂ ಆ ತಂಡದ ನಾಯಕನ ನಡುವಿನ ಕೆಲವು ತಮಾಷೆಯ ಭಾಗವಾಗಿದೆಯೇ ಎಂದು ಆರಂಭದಲ್ಲಿ ಅರ್ಥಮಾಡಿಕೊಳ್ಳಲು ಕಷ್ಟವಾಗಿದ್ದರೂ, ರಾಜಸ್ಥಾನ ರಾಯಲ್ಸ್ ಟ್ವೀಟ್ ಅನ್ನು ಅಳಿಸಿದ ನಂತರ ವಿಷಯ ಸ್ಪಷ್ಟವಾಯಿತು.

ಆರಂಭಿಕ ಟ್ವೀಟ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬಸ್‌ನಲ್ಲಿ ಸ್ಯಾಮ್ಸನ್‌ ಕುಳಿತಿದ್ದ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಫೋಟೊದ ಮೇಲೆ ಕ್ಯಾಪ್ ಹಾಗೂ ಸನ್ ಗ್ಲಾಸ್ ಚಿತ್ರ ಬಿಡಿಸಲಾಗಿದೆ. "ಕ್ಯಾ ಖೂಬ್ ಲಗ್ತೆ ಹೋ..." ಎಂಬ ಶೀರ್ಷಿಕೆಯೊಂದಿಗೆ ನಗುವ ಎಮೋಜಿ ಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News