ಮಹಿಳಾ ವಿಶ್ವಕಪ್‌ ಕ್ರಿಕೆಟ್:‌ ಸತತ ಏಳನೆ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಆಸ್ಟ್ರೇಲಿಯಾ ತಂಡ

Update: 2022-04-03 09:26 GMT
Photo: Twitter/Lords cricket ground

ಕ್ರೈಸ್ಟ್‌ ಚರ್ಚ್:‌ ಇಲ್ಲಿನ ಹಾಗ್ಲೇ ಓವಲ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ ಮಹಿಳಾ ಕ್ರಿಕೆಟ್‌ ನ ಫೈನಲ್‌ ಪಂದ್ಯಾಟದಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಏಳನೇ ಬಾರಿಗೆ ವಿಶ್ವಕಪ್‌ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡ ಇತಿಹಾಸ ನಿರ್ಮಿಸಿದೆ. 

ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡದ ಪರ ವಿಕೆಟ್‌ ಕೀಪರ್‌ ಹೇಲಿ 170 ರನ್‌ ಗಳನ್ನು ಬಾರಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ತೋರಿದರು. ಸಹ ಆಟಗಾರ್ತಿಯರಾದ ಹೇನ್ಸ್‌ 68 ಹಾಗೂ ಮೂನಿ 62 ರನ್‌ ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು ಐದು ವಿಕೆಟ್‌ ನಷ್ಟಕ್ಕೆ 365 ರನ್‌ ಗಳಿಸಿತು. ಬಳಿಕ ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ತಂಡವು ಕೇವಲ 285 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News