×
Ad

ಅಭಿನಂದನ್ ವರ್ಧಮಾನ್‌ ರನ್ನು ಬಿಡುಗಡೆಗೊಳಿಸಿದ್ದು ಇಮ್ರಾನ್‌ ಖಾನ್: ಪಿಟಿಐ ಮುಖಂಡರ ಹೇಳಿಕೆ

Update: 2022-04-11 23:37 IST
Photo: PTI

ಇಸ್ಲಮಾಬಾದ್, ಎ.11: ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಯ ಬಳಿಕ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ಪ್ರಧಾನಿಯಾಗಿದ್ದ ಇಮ್ರಾನ್ಖಾನ್ ಭಾರತಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದರು ಮತ್ತು ಅಭಿನಂದನ್ ವರ್ಧಮಾನ್ರನ್ನು ಬಿಡುಗಡೆಗೊಳಿಸಿ ಭಾರತಕ್ಕೆ ವಾಪಾಸು ಕಳಿಸಿರುವುದಕ್ಕೆ ದೇಶ ಹೆಮ್ಮೆಪಟ್ಟುಕೊಳ್ಳಬೇಕು ಎಂದು ಇಮ್ರಾನ್‌ ಖಾನ್ ಅವರ ಪಕ್ಷದ ಸದಸ್ಯ ಶಾ ಮುಹಮ್ಮದ್ ಖುರೇಶಿ ಸೋಮವಾರ ಹೇಳಿದ್ದಾರೆ.

ಸಂಸತ್ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಮ್ರಾನ್‌ ಖಾನ್ ಅವರ ಈ ನಡೆ ಶ್ಲಾಘನೆಗೆ ಪಾತ್ರವಾಗಿತ್ತು ಎಂದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಅಭಿನಂದನ್ ಹೊಡೆದುರುಳಿಸಿದ್ದರು. ಆದರೆ ಅವರ ವಿಮಾನವನ್ನು ಪಾಕ್ ಸೇನೆ ನೆಲಕ್ಕುರುಳಿಸಿದಾಗ ಶತ್ರುಗಳ ಪಡೆಗೆ ಸಿಕ್ಕಿಬಿದ್ದಿದ್ದರು. ಬಳಿಕ ಭಾರತದ ತೀವ್ರ ಒತ್ತಡದ ಕಾರಣ ಪಾಕಿಸ್ತಾನ ಅವರನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಹಸ್ತಾಂತರಿಸಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News