×
Ad

ಚೀನಾದ ಶಾಂಘೈ ನಗರದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳು; ಅಗತ್ಯ ವಸ್ತುಗಳಿಗೆ ಜನರ ಪರದಾಟ

Update: 2022-04-15 17:56 IST

ಚೀನಾ: ಚೀನಾದ ಶಾಂಘಾಯ್ ನಗರದಲ್ಲಿ ಮಾರ್ಚ್ 28ರಿಂದ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದರೂ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ಗುರುವಾರ 22,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಈ ನಡುವೆ ಆಡಳಿತ ವಿಧಿಸಿರುವ ಹಲವಾರು ನಿರ್ಬಂಧಗಳಿಂದ ಆಹಾರ ಮತ್ತು ಇತರ ಅಗತ್ಯು ವಸ್ತುಗಳ ಪೂರೈಕೆ ಬಾಧಿತವಾಗಿದ್ದು ನಗರದ ಹಲವಾರು ಸೂಪರ್ ಮಾರ್ಕೆಟ್‍ಗಳು ಕೂಡ ಬಂದ್ ಆಗಿವೆ. ಇದು ನಾಗರಿಕರಲ್ಲಿ ಆಕ್ರೋಶ ಮೂಡಿಸಿದ್ದು ಹಲವು ದಿನಸಿ ಅಂಗಡಿಗಳನ್ನು ಜನರು ಲೂಟಿಗೈದಿದ್ದಾರೆ.

ಸದ್ಯದ ಪರಿಸ್ಥಿತಿಯಿಂದ ಆಕ್ರೋಶಗೊಂಡು ಜನರು ತಮ್ಮ ಮನೆಗಳಲ್ಲಿ ಚೀರಾಡುವ ವೀಡಿಯೋಗಳೂ ಹೊರಬಿದ್ದಿವೆ.

ಶಾಂಘಾಯ್ ನಗರದ ಸುಮಾರು 58 ಲಕ್ಷ ನಾಗರಿಕರು 60 ವರ್ಷ ಮೇಲ್ಪಟ್ಟವರಾಗಿದ್ದು ಆಹಾರ ಮತ್ತಿತರ ಅಗತ್ಯ ವಸ್ತುಗಳಿಗೆ ಪರದಾಡುತ್ತಿದ್ದಾರೆ. ನಗರದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಸೋಂಕಿತರನ್ನು ಇರಿಸಲು ವಸತಿ ಸಂಕೀರ್ಣಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಇದು ಸುತ್ತಲಿನ ನಿವಾಸಿಗಳಲ್ಲಿ ಭಯಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News