ಚರ್ಚೆಗೆ ಗ್ರಾಸವಾದ ಡೆಲ್ಲಿ-ರಾಜಸ್ಥಾನ ನಡುವಿನ ಐಪಿಎಲ್ ಪಂದ್ಯದ ಅಂತಿಮ ಓವರ್
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದ ಅಂತಿಮ ಓವರ್ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಅಂತಿಮ ಓವರ್ ನ 3ನೇ ಎಸೆತವನ್ನು ನೋ ಬಾಲ್ ಎಂದು ತೀರ್ಪು ನೀಡಲಿಲ್ಲ ಎಂದು ರಿಷಬ್ ಪಂತ್ ಬಳಗವು ಫೀಲ್ಡ್ ಅಂಪೈರ್ ವಿರುದ್ಧ ಅಸಮಾಧಾನ ಹೊರಹಾಕಿತು. ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕ ರಿಷಬ್ ಪಂತ್ ಕೋಚ್ ಪ್ರವೀಣ್ ಆಮ್ರೆ ಅವರನ್ನು ನೋ ಬಾಲ್ ನೀಡದಿರುವ ಅಂಪೈರ್ ನಿರ್ಧಾರವನ್ನು ಪ್ರತಿಭಟಿಸಲು ಮೈದಾನ್ಕೆ ಕಳುಹಿಸುವುದರೊಂದಿಗೆ ವಿವಾದ ಸೃಷ್ಟಿಸಿದರು.
ಅಂತಿಮ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆ ಗೆಲುವಿಗೆ 36 ರನ್ ಅಗತ್ಯವಿತ್ತು. ರೋವ್‌ಮನ್ ಪೊವೆಲ್ ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ್ದರು. ಆದರೆ, ಆ ಓವರ್‌ನ ಮೂರನೇ ಎಸೆತ ಭಾರೀ ಚರ್ಚೆಗೆ ಗ್ರಾಸವಾಯಿತು. ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಓಬೆಡ್ ಮೆಕಾಯ್ ಫುಲ್ ಟಾಸ್ ಬೌಲಿಂಗ್ ಮಾಡಿದರು. ಪೊವೆಲ್ ಆ ಎಸೆತವನ್ನು ಸಿಕ್ಸರ್ ಸಿಡಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಎಸೆತವನ್ನು ನೋ-ಬಾಲ್ ಎಂದು ಭಾವಿಸಿತು ಹಾಗೂ ಅದನ್ನು ನೋ-ಬಾಲ್ ಎಂದು ಪರಿಗಣಿಸಲು ಅಂಪೈರ್ ಕಡೆಗೆ ಸನ್ನೆ ಮಾಡಲು ಆರಂಭಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರು ನೋ ಬಾಲ್ ಅನ್ನು ಪರಿಗಣಿಸುವಂತೆ ಮೈದಾನದ ಅಧಿಕಾರಿಗಳಾದ ನಿತಿನ್ ಮೆನನ್ ಹಾಗೂ ನಿಖಿಲ್ ಪಟವರ್ಧನ್ ಕಡೆಗೆ ಸನ್ನೆ ಮಾಡಲಾರಂಭಿಸಿದರು.
ನಂತರ ಅವರು ಬ್ಯಾಟರ್‌ಗಳಾದ ರೋವ್‌ಮನ್ ಪೊವೆಲ್ ಹಾಗೂ ಕುಲದೀಪ್ ಯಾದವ್ ಅವರನ್ನು ಮೈದಾನದಿಂದ ಹೊರಗೆ ಕರೆಯುವಂತೆ ಸೂಚನೆ ನೀಡಲಾರಂಭಿಸಿದರು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಕೂಡ ಮೈದಾನದೊಳಗೆ ಪ್ರವೇಶಿಸಿ ಅಂಪೈರ್ ಜೊತೆ ಮಾತಿಗೆ ನಿಂತರು.
ಆಮ್ರೆ ಅಂಪೈರ್ ರೊಂದಿಗೆ ವಾದಿಸುತ್ತಿದ್ದಾಗ ರಾಜಸ್ಥಾನ ಬ್ಯಾಟರ್ ಜೋಸ್ ಬಟ್ಲರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಡಗ್ ಔಟ್ ನತ್ತ ತೆರಳಿ ರಿಷಭ್ ಪಂತ್ ಜೊತೆಗೆ ವಾಗ್ವಾದ ನಡೆಸಿದರು.
ಆ ನಂತರ ಪಂದ್ಯ ಮುಂದುವರಿಯಿತು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡವು 15 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.
ಜೋಸ್ ಬಟ್ಲರ್ ಈ ವರ್ಷದ ಐಪಿಎಲ್ ನಲ್ಲಿ ಮೂರನೇ ಶತಕವನ್ನು ಸಿಡಿಸಿದರು. ಇದಕ್ಕೆ ಉತ್ತರವಾಗಿ ರಾಜಸ್ಥಾನ 207 ರನ್ ಗಳಿಸಿ ಸೋಲೊಪ್ಪಿಕೊಂಡಿತು.