×
Ad

ಇಂಗ್ಲೆಂಡ್ ಫುಟ್ಬಾಲ್ ತಂಡದ ನಾಯಕ ಹ್ಯಾರಿ ಕೇನ್ ನೆಚ್ಚಿನ ಐಪಿಎಲ್ ತಂಡ ಯಾವುದು ಗೊತ್ತೇ?

Update: 2022-04-23 19:39 IST
ಹ್ಯಾರಿ ಕೇನ್ (Photo: Twitter/@HKane)

ಲಂಡನ್: ಕ್ರಿಕೆಟ್ ಪಂದ್ಯದ ಅಭಿಮಾನಿ ಹಾಗೂ ಈ ಹಿಂದೆ ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್ ಸಹ ಆಟಗಾರರೊಂದಿಗೆ ಕ್ರಿಕೆಟ್ ಆಡಿದ್ದ ಇಂಗ್ಲೆಂಡ್ ಫುಟ್ಬಾಲ್ ತಂಡದ ನಾಯಕ ಹ್ಯಾರಿ ಕೇನ್  ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಮ್ಮ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾಗಿದೆ ಎಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಂಡ ಎಫ್ ಡು ಪ್ಲೆಸಿಸ್ ನೇತೃತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಋತುವಿನಲ್ಲಿ ಅದ್ಭುತ ಸಾಧನೆ  ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತನ್ನ ನೆಚ್ಚಿನ ಐಪಿಎಲ್ ತಂಡದ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಹ್ಯಾರಿ ಕೇನ್,  ನನ್ನ ನೆಚ್ಚಿನ ತಂಡ  ಆರ್ ಸಿಬಿ. ವಿರಾಟ್ ಕೊಹ್ಲಿಯನ್ನು ಕೆಲವು ಬಾರಿ ಭೇಟಿಯಾಗುವ ಮತ್ತು ಅವರೊಂದಿಗೆ ಮಾತನಾಡುವ ಅದೃಷ್ಟ ನನಗೆ ಸಿಕ್ಕಿದೆ. ಆರ್ ಸಿಬಿ ಈ ಬಾರಿ ಕೆಲವು ಉತ್ತಮ ಆಟಗಾರರನ್ನು ಆಯ್ಕೆ ಮಾಡಿದೆ ಎಂದರು.

""ಆರ್ ಸಿಬಿ  ಕಳೆದ ವರ್ಷ ಅದೃಷ್ಟಶಾಲಿಯಾಗಿರಲಿಲ್ಲ. ಆದರೆ ಅದು  ಈ ವರ್ಷ ಉತ್ತಮ ಆರಂಭ ಪಡೆದಿದೆ.  ಐಪಿಎಲ್‌ನಲ್ಲಿ ಕೆಲವು ಶ್ರೇಷ್ಠ ತಂಡಗಳಿವೆ. ನಾನು ಎಲ್ಲ ತಂಡವನ್ನು  ಪ್ರಾಮಾಣಿಕವಾಗಿ ವೀಕ್ಷಿಸಲು ಇಷ್ಟಪಡುತ್ತೇನೆ.  ಆದರೆ  ಆರ್ ಸಿಬಿ ಚೆನ್ನಾಗಿ ಆಡಬಹುದು ಎಂದು ಆಶಿಸುತ್ತೇನೆ'' ಎಂದು ಅವರು ಹೇಳಿದರು.

ಹ್ಯಾರಿ ಕೇನ್ ಅವರು ವಿರಾಟ್ ಕೊಹ್ಲಿಯ ಬ್ಯಾಟಿಂಗ್‌ನ ದೊಡ್ಡ ಅಭಿಮಾನಿಯಾಗಿದ್ದಾರೆ. ಅವರು ಭಾರತದ ಮಾಜಿ ನಾಯಕನ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದಾರೆ ಹಾಗೂ ಒಬ್ಬ ವ್ಯಕ್ತಿಯಾಗಿ ಅವರನ್ನು ಏಕೆ ಮೆಚ್ಚಿದ್ದೇನೆ ಹಾಗೂ ತಾನು ಕ್ರಿಕೆಟ್ ಆಡುವುದನ್ನು,  ಐಪಿಎಲ್ ನೋಡುವುದನ್ನುಎಷ್ಟು ಆನಂದಿಸುತ್ತೇನೆ ಎನ್ನುವುದನ್ನು ಹಂಚಿಕೊಂಡಿದ್ದಾರೆ.

"ವಿರಾಟ್ ಪಂದ್ಯ ವೀಕ್ಷಿಸಲು ಅದ್ಭುತವಾಗಿದೆ. ಅವರು ನಿಜವಾದ ಡೌನ್ ಟು ಅರ್ಥ್ ವ್ಯಕ್ತಿ. ಅವರ ಬ್ಯಾಟಿಂಗ್‌ನಲ್ಲಿ ಬೆಂಕಿ ಹಾಗೂ  ಉತ್ಸಾಹವನ್ನು ನೀವು ನೋಡಿದಾಗ ಅದು ನೋಡಲು ಅದ್ಭುತವಾಗಿರುತ್ತದೆ ಎಂದು ಕೇನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News