×
Ad

ಐಪಿಎಲ್: ನಟರಾಜನ್,ಜಾನ್ಸನ್ ಮಾರಕ ದಾಳಿ, ಆರ್‌ಸಿಬಿ ಧೂಳೀಪಟ

Update: 2022-04-23 21:22 IST
Photo:twitter

 ಮುಂಬೈ, ಎ.23: ಸನ್‌ರೈಸರ್ಸ್ ಹೈದರಾಬಾದ್ ತಂಡದ ಎಡಗೈ ವೇಗದ ಬೌಲರ್‌ಗಳಾದ ಟಿ.ನಟರಾಜನ್(3-10) ಹಾಗೂ ಮಾರ್ಕೊ ಜಾನ್ಸನ್(3-25)ಸಂಘಟಿಸಿದ ಮಾರಕ ಬೌಲಿಂಗ್ ದಾಳಿಗೆ ದಿಕ್ಕಾಪಾಲಾದ ಆರ್‌ಸಿಬಿ ಕೇವಲ 68 ರನ್‌ಗೆ ಆಲೌಟಾಗಿದೆ.

ಶನಿವಾರ ನಡೆದ ಐಪಿಎಲ್‌ನ 36ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ 16.1 ಓವರ್‌ಗಳಲ್ಲಿ ಕೇವಲ 68 ರನ್‌ಗೆ ಗಂಟುಮೂಟೆ ಕಟ್ಟಿತು. ಮಾಜಿ ನಾಯಕ ವಿರಾಟ್ ಕೊಹ್ಲಿ ,ಆರಂಭಿಕ ಬ್ಯಾಟರ್ ಅನುಜ್ ರಾವತ್ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ರನ್ ಖಾತೆ ತೆರೆಯಲು ವಿಫಲರಾದರು. ಸುಯಶ್ ಪ್ರಭುದೇಸಾಯಿ 15 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.
   
ನಾಯಕ ಎಫ್‌ಡು ಪ್ಲೆಸಿಸ್(5 ರನ್)2ನೇ ಓವರ್‌ನಲ್ಲಿ ಔಟಾಗುವುದರೊಂದಿಗೆ ಆರ್‌ಸಿಬಿ ವಿಕೆಟ್ ಪತನ ಆರಂಭವಾಯಿತು. ಜಾನ್ಸನ್ ತಾನೆಸೆದ ಮೊದಲ ಓವರ್‌ನಲ್ಲಿ ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ವಿಕೆಟ್ ಪಡೆದು ಅಬ್ಬರಿಸಿದರು. ಉಮ್ರಾನ್ ಮಲಿಕ್ ಮಧ್ಯಮ ಓವರ್‌ನಲ್ಲಿ ಹಾಗೂ ನಟರಾಜನ್ ಡೆತ್ ಓವರ್‌ನಲ್ಲಿ ಆರ್‌ಸಿಬಿ ಮೇಲೆ ಮುಗಿಬಿದ್ದರು. ಶಿಸ್ತುಬದ್ಧ ಬೌಲಿಂಗ್ ಮಾಡಿದ ನಟರಾಜನ್, ಜಾನ್ಸನ್‌ಗೆ ಜಗದೀಶ ಸುಚಿತ್(2-12), ಭುವನೇಶ್ವರ ಕುಮಾರ್(1-8) ಹಾಗೂ ಉಮ್ರಾನ್ ಮಲಿಕ್(1-13) ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News