×
Ad

ಕೊನೆಯ ಓವರ್ ನಲ್ಲಿ 2 ಸಿಕ್ಸರ್ ಸಿಡಿಸಿದ ಬಳಿಕ ರಿಯಾನ್ ಪರಾಗ್-ಹರ್ಷಲ್ ಪಟೇಲ್ ವಾಕ್ಸಮರ

Update: 2022-04-27 10:59 IST

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್ ನಲ್ಲಿ  ರಾಜಸ್ಥಾನ ರಾಯಲ್ಸ್  ಆಲ್ ರೌಂಡರ್  ರಿಯಾನ್ ಪರಾಗ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ   ಹರ್ಷಲ್ ಪಟೇಲ್ ಅವರೊಂದಿಗೆ  ತೀವ್ರ ವಾಗ್ವಾದಕ್ಕೆ ಇಳಿದರು.

ರಾಜಸ್ಥಾನದ ಮೊದಲ ಇನಿಂಗ್ಸ್ ಕೊನೆಗೊಂಡ ಬಳಿಕ ಈ ಘಟನೆ ನಡೆದಿದೆ.  ಹರ್ಷಲ್ ಬೌಲ್ ಮಾಡಿದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪರಾಗ್ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು.

ಪರಾಗ್  ಸಿಕ್ಸರ್ ಸಿಡಿಸಿ ರಾಜಸ್ಥಾನದ ಇನಿಂಗ್ಸ್  ಕೊನೆಗೊಳಿಸಿದರು.  ಕೊನೆಯ ಓವರ್ ನಲ್ಲಿ ಅಸ್ಸಾಂ ಆಟಗಾರ ಪರಾಗ್  ಒಟ್ಟು  18 ರನ್ ಗಳಿಸಿದರು. ರಾಜಸ್ಥಾನ ಬ್ಯಾಟರ್ 31 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿ ಇನಿಂಗ್ಸ್ ಅನ್ನು ಕೊನೆಗೊಳಿಸಿದರು. ಪರಾಗ್ ಮೈದಾನದಿಂದ ಹೊರ ನಡೆಯುತ್ತಿರುವಾಗ ಹರ್ಷಲ್ ಪಟೇಲ್ ಅವರೊಂದಿಗೆ ವಾಕ್ಸಮರ ನಡೆಸಿದರು. ಅವರನ್ನು ರಾಜಸ್ಥಾನದ ಸಹಾಯಕ ಸಿಬ್ಬಂದಿ ಸದಸ್ಯರು ತಡೆದರು.

ಈ ಇಬ್ಬರ ನಡುವಿನ ಮಾತಿನ ಚಕಮಕಿಗೆ ಕಾರಣ ಏನೆಂದು ಸ್ಪಷ್ಟವಾಗಿಲ್ಲ.ಉಭಯ ತಂಡಗಳ ಆಟಗಾರರು ಮೈದಾನದಿಂದ ಹೊರ ನಡೆಯುವಾಗ ಮಾತಿನ ಚಕಮಕಿಯಲ್ಲಿ ತೊಡಗಿದ್ದು ಕಂಡುಬಂತು.

ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ತಂಡವು 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಪರಾಗ್ ಏಕಾಂಗಿ ಹೋರಾಟ ನೀಡಿ ರಾಜಸ್ಥಾನ ಸ್ಪರ್ದಾತ್ಮಕ ಮೊತ್ತ ಗಳಿಸಲು ನೆರವಾದರು. ರಾಜಸ್ಥಾನವು ಈ ಪಂದ್ಯವನ್ನು ಗೆದ್ದುಕೊಂಡಿದೆ.

ಪ್ರಸಕ್ತ ಋತುವಿನಲ್ಲಿ ಪರಾಗ್ ಅವರ ಅತ್ಯುತ್ತಮ ಪ್ರದರ್ಶನವನ್ನು ನೀಡಿಲ್ಲ. ಎಂಟು ಪಂದ್ಯಗಳಲ್ಲಿ ಕೇವಲ 104 ರನ್ ಗಳನ್ನು ದಾಖಲಿಸಿದ್ದಾರೆ.

ಕಳೆದ ವರ್ಷ ಐಪಿಎಲ್ ನಲ್ಲಿ ' ಪರ್ಪಲ್ ಕ್ಯಾಪ್' ವಿಜೇತ ಹರ್ಷಲ್ ಪಟೇಲ್ ಈ ಋತುವಿನಲ್ಲಿ ಆರ್ ಸಿಬಿಗಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಹಾಗೂ  ಎಂಟು ಪಂದ್ಯಗಳಲ್ಲಿ 10 ವಿಕೆಟ್ ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News