ಆಕ್ರಮಿತ ಉಕ್ರೇನ್ನಲ್ಲಿ ರೂಬಲ್ ಕರೆನ್ಸಿ ಜಾರಿ: ರಶ್ಯ ಘೋಷಣೆ ‌

Update: 2022-04-28 18:26 GMT
PHOTO:TWITTER

ಕೀವ್, ಎ.28: ಈಗ ನಡೆಯುತ್ತಿರುವ ಯುದ್ಧದ ಸಂದರ್ಭ ತನ್ನ ವಶಕ್ಕೆ ಬಂದಿರುವ ಉಕ್ರೇನ್ನ ಪ್ರದೇಶದಲ್ಲಿ ಮುಂದಿನ ದಿನದಲ್ಲಿ ರೂಬಲ್ ಕರೆನ್ಸಿ ಜಾರಿಗೊಳಿಸಲಾಗುವುದು ಎಂದು ರಶ್ಯದ ಅಧಿಕಾರಿ ಗುರುವಾರ ಹೇಳಿದ್ದಾರೆ.

   ಯುದ್ಧದಲ್ಲಿ ವಶಪಡಿಸಿಕೊಂಡ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ರಶ್ಯ ಯುದ್ಧದ ಆರಂಭದಲ್ಲಿ ಹೇಳಿಕೆ ನೀಡಿತ್ತು. ಆದರೆ ಈಗ ರಶ್ಯದ ಅಧಿಕಾರಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಮೇ 1ರಿಂದ ಆಕ್ರಮಿತ ಪ್ರದೇಶದಲ್ಲಿ ರೂಬಲ್ ಯುಗದ ಆರಂಭವಾಗಲಿದೆ. 4 ತಿಂಗಳು ರಿಯಾಯಿತಿಯ ಅವಧಿಯಲ್ಲಿ ಉಕ್ರೇನ್ನ ಕರೆನ್ಸಿ ಹ್ರಿವ್ನಿಯಾವನ್ನೂ ಬಳಸಬಹುದು. 4 ತಿಂಗಳ ಬಳಿಕ ಕೇವಲ ರೂಬಲ್ ಮಾತ್ರ ಚಲಾವಣೆಯಲ್ಲಿರಲಿದೆ ಎಂದು ರಶ್ಯದ ಅಧಿಕಾರಿ ಕಿರಿಲ್ ಸ್ಟ್ರೆಮೌಸೊವ್ರನ್ನು ಉಲ್ಲೇಖಿಸಿ ರಶ್ಯದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಆರ್ಐಎ ನೊವೊಸ್ತಿ ವರದಿ ಮಾಡಿದೆ.
ದಕ್ಷಿಣದ ಖೆರ್ಸಾನ್ ಪ್ರದೇಶ ಸಂಪೂರ್ಣವಾಗಿ ತನ್ನ ವಶಕ್ಕೆ ಬಂದಿರುವುದಾಗಿ ರಶ್ಯ ಈ ವಾರದ ಆರಂಭದಲ್ಲಿ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News