×
Ad

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಧೋನಿಗೆ ಮರಳಿಸಿದ ಜಡೇಜಾ

Update: 2022-04-30 19:46 IST
photo: twitter/ChennaiIPL

ಹೊಸದಿಲ್ಲಿ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಹಸ್ತಾಂತರಿಸಿದ್ದಾರೆ.

ಈ ಬಗ್ಗೆ ಟ್ವಿಟರಿನಲ್ಲಿ ಮಾಹಿತಿ ನೀಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ʼತಮ್ಮ ಆಟದ ಮೇಲೆ ಹೆಚ್ಚಿನ ಗಮನ ಹರಿಸಲು ತಂಡದ ನಾಯಕತ್ವ ಸ್ಥಾನ ತ್ಯಜಿಸಲು ರವೀಂದ್ರ ಜಡೇಜಾ ನಿರ್ಧರಿಸಿದ್ದಾರೆʼ ಎಂದು ತಿಳಿಸಿದೆ.

ಜಡೇಜಾ ಅವರ ಆಟದ ಮೇಲೆ ಕೇಂದ್ರೀಕರಿಸುವ ಸಲುವಾಗಿ ತಂಡವನ್ನು ಮುನ್ನಡೆಸಲು ಎಂ ಎಸ್‌ ಧೋನಿ ಒಪ್ಪಿಕೊಂಡಿದ್ದಾರೆ ಎಂದು ಸಿಎಸ್‌ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News