×
Ad

ವಿಲ್ಲರ್‍ರಿಯಲ್ ಮಣಿಸಿದ ಲಿವರ್‌ ಪೂಲ್ ಫುಟ್ಬಾಲ್ ಚಾಂಪಿಯನ್ಸ್ ಲೀಗ್ ಫೈನಲ್‍ಗೆ

Update: 2022-05-04 07:45 IST

ಸ್ಪೇನ್ : ವಿಲ್ಲರ್‍ರಿಯಲ್ ತಂಡದ ಪ್ರತಿಹೋರಾಟಕ್ಕೆ ತಡೆಯೊಡ್ಡಿ 5-2 ಗೋಲುಗಳ ಭರ್ಜರಿ ಜಯದೊಂದಿಗೆ ಲಿವರ್‌ ಪೂಲ್ ಕ್ಲಬ್ ತಂಡ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ ತಲುಪಿದೆ.

ದ್ವಿತೀಯಾರ್ಧದಲ್ಲಿ ಫ್ಯಾಬಿನೊ, ಲೂಯಿಸ್ ಡಯಾಸ್ ಮತ್ತು ಸ್ಯಾಡಿಯೊ ಮನ್ ಅವರ ಮಿಂಚಿನ ಗೋಲುಗಳು ಭಾರಿ ಅಂತರದ ಗೆಲುವಿಗೆ ನೆರವಾದವು.

ಮೊದಲಾರ್ಧದಲ್ಲಿ 0-2 ಹಿನ್ನಡೆಯಿಂದ ಚೇತರಿಸಿಕೊಂಡ ಮಿಲ್ಲರ್‍ರಿಯಲ್ ಒಂದು ಹಂತದಲ್ಲಿ ಅದ್ಭುತ ಪ್ರತಿ ಹೋರಾಟ ಸಂಘಟಿಸಿ, ಸಮಬಲ ಸಾಧಿಸಿತು. ಬೊಲಾಯೆ ದಿಯಾ ಮೂರನೇ ನಿಮಿಷದಲ್ಲಿ ಮತ್ತು ಫ್ರಾನ್ಸಿಸ್ ಕೊಕ್ಲಿನ್ ಗಳಿಸಿದ ಗೋಲುಗಳಿಂದಾಗಿ ತಂಡ 2-2 ಸಮಬಲ ಸಾಧಿಸಿತು.

ಆದರೆ ಜುರ್ಗೆನ್ ಕ್ಲೋಪ್ ಅವರು ಡಯಾಸ್ ಮೂಲಕ ಡಿಯೊಗೊ ಜೋಟಾ ಅವರಿಗೆ ಎಸೆದ ಚೆಂಡು ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಪ್ರವಾಸಿ ತಂಡ ಕೇವಲ 12 ನಿಮಿಷಗಳ ಅವಧಿಯಲ್ಲಿ ಮೂರು ಗೋಲುಗಳನ್ನು ಗಳಿಸಿ, ವಿಲ್ಲರ್‍ರಿಯಲ್ ತಂಡದ ಹೋರಾಟವನ್ನು ಸದೆಬಡಿದು ಐದು ವರ್ಷಗಳಲ್ಲಿ ಮೂರನೇ ಬಾರಿಗೆ ಪ್ರತಿಷ್ಠಿತ ಟೂರ್ನಿಯ ಫೈನಲ್ ತಲುಪಿತು.

ಸ್ಯಾಂಟಿಗೊ ಬರ್ನ್‍ಬೆವುನಲ್ಲಿ ಬುಧವಾರ ನಡೆಯುವ ರಿಯಲ್ ಮ್ಯಾಡ್ರಿಡ್ ಮತ್ತು ಮ್ಯಾಂಚೆಸ್ಟರ್ ಸಿಟಿ ನಡುವಿನ ಪಂದ್ಯದಲ್ಲಿ ವಿಜೇತರಾದವರನ್ನು ಲಿವರ್‌ ಪೂಲ್ ಫೈನಲ್‍ನಲ್ಲಿ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News