ಐಪಿಎಲ್: ರಜತ್ ಪಾಟಿದಾರ್ ಸಿಕ್ಸರ್‌ನತ್ತ ಸಿಡಿಸಿದ ಚೆಂಡು ಬಡಿದು ಹಿರಿಯ ಕ್ರಿಕೆಟ್ ಅಭಿಮಾನಿಗೆ ಗಾಯ

Update: 2022-05-14 16:03 GMT
Photo: Twitter/@VarmaFan1

  ಮುಂಬೈ, ಮೇ 14: ಪಂಜಾಬ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ರಜತ್ ಪಾಟಿದಾರ್ ಸಿಕ್ಸರ್‌ನತ್ತ ಸಿಡಿಸಿದ ಚೆಂಡು ಹಿರಿಯ ಕ್ರಿಕೆಟ್ ಅಭಿಮಾನಿಯೊಬ್ಬರ ತಲೆಗೆ ಬಡಿದು ಗಾಯವಾಗಿರುವ ಘಟನೆ ನಡೆದಿದೆ.
  
ಆರ್‌ಸಿಬಿ ಗೆಲ್ಲಲು 210 ರನ್ ಬೆನ್ನಟ್ಟುವಾಗ ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಪಾಟಿದಾರ್ ಅವರು ಹರ್‌ಪ್ರೀತ್ ಬ್ರಾರ್ ಎಸೆದ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು.ಚೆಂಡು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಹಿರಿಯ ಕ್ರಿಕೆಟ್ ಅಭಿಮಾನಿಯೊಬ್ಬರ ತಲೆಗೆ ಬಡಿದಿದೆ. ಚೆಂಡಿನ ಹೊಡೆತದಿಂದ ಅಸ್ವಸ್ಥರಾದಂತೆ ಕಂಡು ಬಂದ ಹಿರಿಯ ವ್ಯಕ್ತಿಯ ತಲೆ ಸವರಿದ ಮಹಿಳೆಯೊಬ್ಬರು ಆರೋಗ್ಯ ವಿಚಾರಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಪಾಟಿದಾರ್ 21 ಎಸೆತಗಳಲ್ಲಿ 26 ರನ್ ಗಳಿಸಿ ರಾಹುಲ್ ಚಹಾರ್‌ಗೆ ವಿಕೆಟ್ ಒಪ್ಪಿಸಿದರು. ಪಂಜಾಬ್ ಕಿಂಗ್ಸ್ ತಂಡದ 9 ವಿಕೆಟ್ ನಷ್ಟಕ್ಕೆ 209 ರನ್‌ಗೆ ಉತ್ತರವಾಗಿ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅಗ್ರ ಸ್ಕೋರರ್ ಎನಿಸಿಕೊಂಡರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News