ಥಾಮಸ್ ಕಪ್: ಮೊದಲ ಬಾರಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ

Update: 2022-05-15 10:16 GMT
Photo:twitter

ಹಾಂಕಾಂಗ್: ಕಿಡಂಬಿ ಶ್ರೀಕಾಂತ್ ನೇತೃತ್ವದ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ ಥಾಮಸ್ ಓಪನ್ ಫೈನಲ್ ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಶ್ಯವನ್ನು 3-0 ಅಂತರದಿಂದ ಮಣಿಸಿ ಮೊದಲ ಬಾರಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡು ಇತಿಹಾಸ ನಿರ್ಮಿಸಿದೆ.

ಶ್ರೀಕಾಂತ್ ಅವರು ಜೋನಾಥನ್ ಕ್ರಿಸ್ಟಿ ವಿರುದ್ಧ ಮೂರನೇ  ಪಂದ್ಯವನ್ನು 21-15 ಹಾಗೂ  23-21 ನೇರ ಗೇಮ್ ಗಳ ಅಂತರದಿಂದ ಗೆದ್ದರು.  ಇದರೊಂದಿಗೆ ಭಾರತವು 3-0 ಅಂತರದಿಂದ ಐತಿಹಾಸಿಕ ಜಯ ಸಾಧಿಸಿತು.

ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ  ಹಾಗೂ ಚಿರಾಗ್ ಶೆಟ್ಟಿ ಎದುರಾಳಿಗಳಾದ ಮುಹಮ್ಮದ್ ಅಹ್ಸಾನ್ ಹಾಗೂ ಕೆವಿನ್ ಸಂಜಯರನ್ನು 18-21,23-21,21-19 ಗೇಮ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ ಭಾರತಕ್ಕೆ 2-0 ಮುನ್ನಡೆ ಒದಗಿಸಿದರು.

ಲಕ್ಷ್ಯ ಸೇನ್ ಇಂಡೋನೇಶ್ಯದ ಅಂಥೋನಿ ಜಿಂಟಿಂಗ್ ರನ್ನು 8-21, 21-17,21-16 ಅಂತರದಿಂದ ಮಣಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News