ಕಾಣೆಯಾಗಿದ್ದ ಪಿಕಾಸೊ ಕಲಾಕೃತಿ ಫಿಲಿಪ್ಪೀನ್ಸ್ ನ ಮಾಜಿ ಪ್ರಥಮ ಮಹಿಳೆಯ ಮನೆಯಲ್ಲಿ ಪತ್ತೆ

Update: 2022-05-15 17:28 GMT
Photo: Twitter/@brennan_migsy

ಮನಿಲಾ, ಮೇ 15: ಖ್ಯಾತ ಚಿತ್ರಕಲಾವಿದ ಪಾಬ್ಲೊ ಪಿಕಾಸೊ ಅವರ ಕಳೆದುಹೋದ ಕಲಾಕೃತಿ ಫಿಲಿಪ್ಪೀನ್ಸ್ ನ ಮಾಜಿ ಪ್ರಥಮ ಮಹಿಳೆ ಇಮೆಲ್ಡಾ ಮಾರ್ಕೋಸ್ ಅವರ ಮನೆಯಲ್ಲಿ ಪತ್ತೆಯಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಇಮೆಲ್ಡಾ ಅವರ ಪುತ್ರ ಫರ್ಡಿನಾಂಡ್ ಮಾಕ್ರೋಸ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂಭ್ರಮಾಚರಣೆ ಸಂದರ್ಭ ಮನೆಯಲ್ಲಿ ಪಿಕಾಸೊ ಅವರ ‘ಒರಗಿಕೊಂಡಿರುವ ಮಹಿಳೆ’  ಕಲಾಕೃತಿ ಪತ್ತೆಯಾಗಿದೆ. ಚುನಾವಣೆಯಲ್ಲಿ ಗೆದ್ದ ಮಗನನ್ನು ಇಮೆಲ್ಡಾ ಬಿಗಿದಪ್ಪಿ ಅಭಿನಂದಿಸುವ ಸಂದರ್ಭ ತೆಗೆದಿರುವ ಫೋಟೋದಲ್ಲಿ ಇಮೆಲ್ಡಾ ಹಿಂಭಾಗದಲ್ಲಿರುವ ಗೋಡೆಯಲ್ಲಿ ಈ ಕಲಾಕೃತಿ ಇರುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ವರದಿಯಾಗಿದೆ.

ಸುಮಾರು 20 ವರ್ಷಕ್ಕೂ ಅಧಿಕ ಸಮಯ ದೇಶದಲ್ಲಿ ಅಧಿಕಾರದಲ್ಲಿದ್ದ ಮಾಕ್ರೋಸ್ ಕುಟುಂಬ, ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಸುಮಾರು 160ಕ್ಕೂ ಅಧಿಕ ಕಲಾಕೃತಿಗಳಲ್ಲಿ ಪಿಕಾಸೊ ಕಲಾಕೃತಿಯೂ ಸೇರಿದೆ ಎಂದು ಫಿಲಿಪ್ಪೀನ್ಸ್ ಸರಕಾರದ ಮಾಜಿ ಅಧಿಕಾರಿಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News