ಈ ವರ್ಷ ಎರಡನೇ ಬಾರಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ರನ್ನು ಮಣಿಸಿದ ಭಾರತದ ಕಿರಿಯ ಚೆಸ್ ಆಟಗಾರ ಪ್ರಜ್ಞಾನಂದ

Update: 2022-05-21 06:34 GMT

ಹೊಸದಿಲ್ಲಿ: ಭಾರತದ ಕಿರಿಯ ಚೆಸ್ ತಾರೆ ಪ್ರಜ್ಞಾನಂದ ಈ ವರ್ಷ ಎರಡನೇ ಬಾರಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ರನ್ನು ಮಣಿಸಿ ವಿಶ್ವದ ಗಮನವನ್ನು ಸೆಳೆದಿದ್ದಾರೆ.

16ರ ವಯಸ್ಸಿನ ಪ್ರಜ್ಞಾನಂದ ಈಗ ನಡೆಯುತ್ತಿರುವ ಚೆಸ್ಸೇಬಲ್ ಮಾಸ್ಟರ್ಸ್ ನಲ್ಲಿ ಐದನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಗೆ ಸೋಲಿನ ರುಚಿ ಉಣಿಸಿದರು.

ಈ ವರ್ಷಾರಂಭದಲ್ಲಿ ಪ್ರಜ್ಞಾನಂದ ಅವರು ಕಾರ್ಲ್‌ಸನ್ ನ್ ರನ್ನು ಸೋಲಿಸಿದ್ದರು. ಮೂರು ತಿಂಗಳಲ್ಲಿ ಮತ್ತೊಮ್ಮೆ ನಾರ್ವೆಯ ಆಟಗಾರನನ್ನು ಸೋಲಿಸಿ ಗಮನ ಸೆಳೆದಿದ್ದಾರೆ.

ಚೆಸ್ಸೇಬಲ್ ಮಾಸ್ಟರ್ಸ್ 16 ಆಟಗಾರರನ್ನು ಒಳಗೊಂಡ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಆಗಿದೆ.

ಕಾರ್ಲ್‌ಸನ್ ಹಾಗೂ  ಪ್ರಜ್ಞಾನಂದ ನಡುವಿನ ಸ್ಪರ್ಧೆಯು ಡ್ರಾದತ್ತ ಸಾಗಿತು.  ಆದರೆ ಕಾರ್ಲ್‌ಸನ್ ತನ್ನ 40 ನೇ ನಡೆಯಲ್ಲಿ ದೊಡ್ಡ ತಪ್ಪು ಮಾಡಿದರು ಹಾಗೂ  ನಂತರ ತಮ್ಮ ಮುಂದಿನ ನಡೆಯಲ್ಲಿ ಸೋಲೊಪ್ಪಿಕೊಂಡರು.

ಈ ಹಿಂದೆ ಈ ವರ್ಷದ ಫೆಬ್ರವರಿಯಲ್ಲಿ ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಟೂರ್ನಮೆಂಟ್‌ನಲ್ಲಿ ಪ್ರಜ್ಞಾನಂದ ಅವರು ಕಾರ್ಲ್‌ಸನ್‌ಗಿಂತ ಉತ್ತಮ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News