ಪ್ರಿಮಿಯರ್ ಲೀಗ್ ಪ್ರಶಸ್ತಿ ಉಳಿಸಿಕೊಂಡ ಮ್ಯಾಂಚೆಸ್ಟರ್ ಸಿಟಿ

Update: 2022-05-23 02:04 GMT
Photo:  twitter.com/ManCity

ಮ್ಯಾಂಚೆಸ್ಟರ್: ನಾಟಕೀಯ ತಿರುವು ಪಡೆದ ಪಂದ್ಯದಲ್ಲಿ 0-2 ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿಕೊಂಡ ಮ್ಯಾಂಚೆಸ್ಟರ್ ಸಿಟಿ ತಂಡ ಅಂತಿಮ ಹದಿನೈದು ನಿಮಿಷದಲ್ಲಿ ಆಸ್ಟನ್ ವಿಲ್ಲಾ ತಂಡವನ್ನು 3-2 ಅಂತರದಿಂದ ಸೋಲಿಸುವ ಮೂಲಕ ಪ್ರಿಮಿಯರ್ ಲೀಗ್ ಪ್ರಶಸ್ತಿಯನ್ನು ಉಳಿಸಿಕೊಂಡಿತು.

ಇಲ್ಕಿ ಗುಂಡಾನ್ ಎರಡು ಹಾಗೂ ರೋಡ್ರಿ ಒಂದು ಗೋಲು ಗಳಿಸುವ ಮೂಲಕ, ಪಾಪ್ ಗಾರ್ಡಿಯೋಲಾ ನೇತೃತ್ವದ ಮ್ಯಾಂಚೆಸ್ಟರ್ ಸಿಟಿ, ಲೀಗ್ ಪಟ್ಟಿಯಲ್ಲಿ ಒಂದು ಅಂಕ ಮುನ್ನಡೆ ಗಳಿಸಿ ಪ್ರಶಸ್ತಿ ಪಡೆಯುವ ಲಿವರ್‌ಪೂಲ್ ಆಸೆಗೆ ತಣ್ಣೀರೆರಚಿದರು.

93ನೇ ನಿಮಿಷದಲ್ಲಿ ಸೆರ್ಗಿಯೊ ಅಗುರಿಯೊ ಅವರು ಗೆಲುವಿನ ಗೋಲು ಗಳಿಸುವ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಗೋಲು ಅಂತರ ಆಧಾರದಲ್ಲಿ ಸೋಲಿಸಿದ ಮ್ಯಾಂಚೆಸ್ಟರ್ ಸಿಟಿ 11 ಸೀಸಸ್‌ಗಳಲ್ಲಿ ಆರನೇ ಲೀಗ್ ಪ್ರಶಸ್ತಿಯನ್ನು ಗೆದ್ದಿತು.

ಮ್ಯಾಟಿ ಕ್ಯಾಷ್ ಮತ್ತು ಲಿವರ್‌ಪೂಲ್‌ನ ಮಾಜಿ ಫೇವರಿಟ್ ಫಿಲಿಪ್ ಕುಟ್ಹಿನೊ ರೆಡ್ಸ್‌ಗೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿದ್ದರು. ಜುರ್ಗೆನ್ ಕೊಪ್ಲೆರ್ ನೇತೃತ್ವದ ತಂಡ ಕೂಡಾ ವೋಲ್ವೆಸ್ ತಂಡವನ್ನು 3-1 ಅಂತರದಿಂದ ಸೋಲಿಸಿತು. ಆದರೆ ಮ್ಯಾಂಚೆಸ್ಟರ್ ಸಿಟಿಯ ಕೊನೆಕ್ಷಣದ ಚೇತರಿಕೆಯಿಂದಾಗಿ ಲಿವರ್‌ಪೂಲ್ ತಂಡದ ನಾಲ್ಕನೇ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News