ಐಪಿಎಲ್: ಇಂದು ವಿರಾಟ್ ಕೊಹ್ಲಿಯ ಮಹಾನ್ ದಾಖಲೆ ಮುರಿಯುವ ವಿಶ್ವಾಸದಲ್ಲಿ ಜೋಸ್ ಬಟ್ಲರ್

Update: 2022-05-29 06:06 GMT
Photo : IndianPremierLeague

ಅಹಮದಾಬಾದ್‌: ಗುಜರಾತ್ ಟೈಟಾನ್ಸ್ ವಿರುದ್ಧ ರವಿವಾರ ರಾತ್ರಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಸ್ಟಾರ್  ಆಟಗಾರ ಜೋಸ್ ಬಟ್ಲರ್ ಗೆ  ಕೆಲವು ಬೃಹತ್ ದಾಖಲೆಗಳನ್ನು ಮುರಿಯುವ ಅವಕಾಶವಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕ್ವಾಲಿಫೈಯರ್ 2  ಪಂದ್ಯದಲ್ಲಿ ಬಟ್ಲರ್  ಈ ಋತುವಿನ  ಐಪಿಎಲ್ ನಲ್ಲಿ ನಾಲ್ಕನೇ ಶತಕವನ್ನು ಗಳಿಸಿದ್ದರು., 2016 ರ ಆವೃತ್ತಿಯಲ್ಲಿ  ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು. ಒಂದು ವೇಳೆ ಬಟ್ಲರ್ ಫೈನಲ್‌ನಲ್ಲಿ ಶತಕ ಬಾರಿಸಿದರೆ, ಅವರು ಐದು ಶತಕಗಳೊಂದಿಗೆ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ.

2016 ರ ಆವೃತ್ತಿಯ  ಐಪಿಎಲ್ ನಲ್ಲಿ ಕೊಹ್ಲಿ 973 ರನ್ ಗಳಿಸಿದ್ದರು ಹಾಗೂ  ಬಟ್ಲರ್ ಆ ದಾಖಲೆಯನ್ನು ಮುರಿಯಲು ಫೈನಲ್‌ನಲ್ಲಿ ಜೀವಮಾನದ ಇನಿಂಗ್ಸ್ ಅನ್ನು  ಆಡಬೇಕಾಗುತ್ತದೆ, ಆದರೂ ಅದು ಸಂಪೂರ್ಣವಾಗಿ ಅಸಾಧ್ಯವೇನಲ್ಲ.

ಬಟ್ಲರ್ ಪ್ರಸ್ತುತ 824 ರನ್‌ಗಳನ್ನು ಗಳಿಸಿದ್ದು,  ಕೊಹ್ಲಿ ಹೆಸರಲ್ಲಿರುವ ರನ್ ದಾಖಲೆಯನ್ನು ಮುರಿಯಲು ಇನ್ನು  150 ಬಾರಿಸಬೇಕಾಗಿದೆ.

ಶುಕ್ರವಾರ ಬಟ್ಲರ್, ಐಪಿಎಲ್ ಸೀಸನ್‌ನಲ್ಲಿ 800 ರನ್‌ಗಳನ್ನು ದಾಟಿದ ಮೂರನೇ ಆಟಗಾರರಾದರು.

ಇಂಗ್ಲೆಂಡ್ ಆಟಗಾರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 89 ರನ್ ಗಳಿಸಿದ್ದರು. ಆ  ನಂತರ ಕ್ವಾಲಿಫೈಯರ್ 2 ರಲ್ಲಿ ಆರ್‌ಸಿಬಿ ವಿರುದ್ಧ ಅಜೇಯ 106 ರನ್ ಗಳಿಸಿದ್ದಾರೆ. ಈ ಮೂಲಕ ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ ನಲ್ಲಿ  ಪ್ರಬಲ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.

ರಾಜಸ್ಥಾನ ರಾಯಲ್ಸ್ 2008 ರ ನಂತರ ಮೊದಲ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ರಾಜಸ್ಥಾನ  ಇತ್ತೀಚೆಗೆ ನಿಧನರಾಗಿರುವ  ಶೇನ್ ವಾರ್ನ್ ಅವರ ನಾಯಕತ್ವದಲ್ಲಿ ಮೊದಲ  ಆವೃತ್ತಿಯ ಟೂರ್ನಿಯನ್ನು ಗೆದ್ದುಕೊಂಡಿತ್ತು. ರಾಜಸ್ಥಾನ  2008 ರ ನಂತರ ಮೊದಲ ಫೈನಲ್  ಬಾರಿ ಫೈನಲ್ ತಲುಪಿದೆ.

ಏತನ್ಮಧ್ಯೆ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಐಪಿಎಲ್ ಋತುವಿನಲ್ಲಿ ಫೈನಲ್ ಪ್ರವೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News