14ನೇ ಬಾರಿ ಫ್ರೆಂಚ್ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್

Update: 2022-06-03 17:37 GMT
Photo:PTI

ಪ್ಯಾರಿಸ್, ಜೂ.3: ಸ್ಪೇನ್‌ನ ಸ್ಟಾರ್ ಆಟಗಾರ ರಫೆಲ್ ನಡಾಲ್ 14ನೇ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಗಾಯಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ ನಡಾಲ್ ಫೈನಲ್‌ಗೆ ಅರ್ಹತೆ ಪಡೆದರು.

ನಡಾಲ್ ರವಿವಾರ ನಡೆಯಲಿರುವ ಫೈನಲ್ ಫೈಟ್‌ನಲ್ಲಿ ದಾಖಲೆಯ 14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.

ಮೂರನೇ ಶ್ರೇಯಾಂಕದ ಝ್ವೆರೆವ್ ಎರಡನೇ ಸೆಟ್‌ನ 12ನೇ ಗೇಮ್‌ನಲ್ಲಿ ಕಾಲುನೋವಿನಿಂದ ಪಂದ್ಯದಿಂದ ನಿವೃತ್ತಿಯಾಗುವಾಗ ನಡಾಲ್ ವಿರುದ್ಧ 6-7(8), 6-6 ಹಿನ್ನಡೆಯಲ್ಲಿದ್ದರು.

ಇದಕ್ಕೂ ಮೊದಲು ನಡಾಲ್ ಮೊದಲ ಸೆಟನ್ನು 91 ನಿಮಿಷಗಳ ಹೋರಾಟದಲ್ಲಿ 7-6(8) ಅಂತರದಿಂದ ಟೈಬ್ರೇಕರ್‌ನಲ್ಲಿ ಗೆದ್ದುಕೊಂಡರು.

"ನಿಜವಾಗಿಯೂ ಈ ರೀತಿಯಾಗಿದ್ದು, ಝ್ವೆರೆವ್‌ಗೆ ಬೇಸರದ ವಿಚಾರ. ಅವರು ನಂಬಲಸಾಧ್ಯ ಟೂರ್ನಿಯನ್ನು ಆಡಿದ್ದಾರೆ. ಅವರು ಕಣ್ಣೀರಿಟ್ಟಿರುವುದನ್ನು ನೋಡಿ ಬೇಸರವಾಯಿತು. ಅವರಿಗೆ ಶುಭವಾಗಲಿ'' ಎಂದು ನಡಾಲ್ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News