ಎರಡನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ಸ್ವಿಯಾಟೆಕ್

Update: 2022-06-04 16:35 GMT
Photo:twitter

ಪ್ಯಾರಿಸ್, ಜೂ.4: ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್ ಅವರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಐಗಾ ಸ್ವಿಯಾಟೆಕ್ ಎರಡನೇ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್ ಅವರು 18ರ ಹರೆಯದ ಗೌಫ್‌ರನ್ನು 6-1, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಇದರೊಂದಿಗೆ ಪೋಲ್ಯಾಂಡ್‌ನ ಆಟಗಾರ್ತಿ ಸತತ 35ನೇ ಪಂದ್ಯವನ್ನು ಗೆದ್ದುಕೊಂಡು ಗೆಲುವಿನ ಓಟ ಮುಂದುವರಿಸಿದರು.

21ನೇ ಶತಮಾನದಲ್ಲಿ ದೀಘ ಸಮಯ ಗೆಲುವಿನ ಓಟ ಕಾಯ್ದುಕೊಂಡು ದಾಖಲೆ ನಿರ್ಮಿಸಿದ್ದ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಸಾಧನೆಯನ್ನು ಸರಿಗಟ್ಟಿದರು.

ಆರಂಭದಿಂದಲೇ ಗೌಫ್ ವಿರುದ್ಧ ಮೇಲುಗೈ ಸಾಧಿಸಿದ ಸ್ವಿಯಾಟೆಕ್ ತನ್ನ ಮುಂಗೈ ಹಾಗೂ ಹಿಂಗೈ ಹೊಡೆತದ ಮೂಲಕ ಗಮನ ಸೆಳೆದರು. ಸ್ವಿಯಾಟೆಕ್ ವೇಗಕ್ಕೆ ಕಡಿವಾಣ ಹಾಕಲು ಗೌಫ್ ಪರದಾಟ ನಡೆಸಿದರು. ಸ್ವಿಯಾಟೆಕ್ 2020ರಲ್ಲಿ ಮೊದಲ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. ಇಂದು ಎರಡನೇ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಸ್ವಿಯಾಟೆಕ್ ಈ ವರ್ಷ ಸತತ 6ನೇ ಪ್ರಶಸ್ತಿಯನ್ನು ಎತ್ತಿ ಹಿಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News