×
Ad

ಮೆಕ್ಸಿಕೊ: ಉದ್ಘಾಟನೆಯ ವೇಳೆ ಕುಸಿದ ತೂಗು ಸೇತುವೆ

Update: 2022-06-09 21:28 IST

ಕ್ವರ್ನವಾಕ (ಮೆಕ್ಸಿಕೊ), ಜೂ. 9: ಮೆಕ್ಸಿಕೊದ ಕ್ವರ್ನವಾಕ ನಗರದಲ್ಲಿ ತೂಗು ಸೇತುವೆಯೊಂದರ ಉದ್ಘಾಟನೆ ನಡೆಯುತ್ತಿದ್ದಂತೆಯೇ ಅದು ಕುಸಿದಿದ್ದು, 10 ಮಂದಿ ಮೂಳೆಮುರಿತಕ್ಕೆ ಒಳಗಾಗಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ ನಗರದ ಮೇಯರ್ ಜೋಸ್ ಲೂಯಿಸ್ ಉರಿಯೊಸ್ಟಿಗುಯಿ ಸೇರಿದಂತೆ 20 ಮಂದಿ ಹೊಂಡಕ್ಕೆ ಬಿದ್ದರು.

ನಗರಪಾಲಿಕೆಯ ನಾಲ್ವರು ಸದಸ್ಯರು, ಇಬ್ಬರು ಅಧಿಕಾರಿಗಳು ಮತ್ತು ಓರ್ವ ಸ್ಥಳೀಯ ಪತ್ರಕರ್ತ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಕ್ವರ್ನವಾಕ ನಗರಪಾಲಿಕೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.ಮೇಯರ್ ಮತ್ತು ಅವರ ಪತ್ನಿ ಸೇರಿದಂತೆ ತೂಗುಸೇತುವೆಯ ಮೇಲಿದ್ದವರು 10 ಅಡಿ ಕೆಳಗೆ ಬಿದ್ದರು ಎಂದು ಸ್ಥಳೀಯ ವರದಿಗಳು ಹೇಳಿವೆ.ಮರದ ಹಲಗೆಗಳು ಮತ್ತು ಲೋಹದ ಸರಪಳಿಗಳ ಸೇತುವೆಯನ್ನು ಪುನರ್ನಿರ್ಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News